Surprise Me!

Baba Rampal's supporters Attacks Police Outside Ashram Opposing His Arrest - TV9

2014-11-18 1 Dailymotion

TV9 News: Baba Rampal's supporters Attacks Police Outside Ashram Opposing His Arrest....,
ಹರ್ಯಾಣದ ವಿವಾದಿತ ಸ್ವಯಂಘೋಷಿತ ದೇವಮಾನವ ಬಾಬಾ ರಾಮ್ ಪಾಲ್ ಆಶ್ರಮದ ಮುಂದೆ ಹಿಂಸಾಚಾರ ನಡೆದಿದೆ. ಬಾಬಾನ ಬಂಧನಕ್ಕೆ ಆಗಮಿಸಿದ ಪೊಲೀಸರ ಮೇಳೆ ಬಾಬಾ ಬೆಂಬಲಿಗರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ, ಪೊಲೀಸರು ಕೂಡ ಫೈರಿಂಗ್ ನಡೆಸಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.

ಇದಕ್ಕೂ ಮುನ್ನ ಬಾಬಾ ಆಶ್ರಮದ ಹೊರಭಾಗದಲ್ಲಿ ಸೇರಿರುವ ಬಾಬಾ ಭಕ್ತರೆನ್ನಲಾದ ಮಹಿಳೆಯರು ಮತ್ತು ಮಕ್ಕಳು ಪೊಲೀಸರು ಒಳನುಗ್ಗಿದ್ರೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡೋ ಬೆದರಿಕೆ ಹಾಕಿದ್ದರು. ಈ ನಡುವೆ, ಪೊಲೀಸರು ಮಹಿಳೆಯರನ್ನು ಮನವೊಲಿಸಿ ತೆರವು ಮಾಡಲು ಪ್ರಯತ್ನಿಸ್ತಿದ್ದರು.

ಇನ್ನು ಹತ್ಯೆ ಹಾಗೂ ಹತ್ಯೆಗೆ ಕುಮ್ಮಕ್ಕು ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರೋ ರಾಮ್ ಪಾಲ್​​ನನ್ನು ಬಂಧಿಸಿ ನವೆಂಬರ್ 21ರಂದು ಕೋರ್ಟ್​ಗೆ ಹಾಜರುಪಡಿಸುವಂತೆ ಹೈಕೋರ್ಟ್​ ಆದೇಶ ಮಾಡಿದೆ. ಜಾಮೀನು ರಹಿತ ಬಂಧನ ವಾರೆಂಟ್ ಎದುರಿಸ್ತಿರುವ ರಾಮ್​ಪಾಲ್ಗೆ ಈ ಮೊದಲು ಮೂರು ಬಾರಿ ಕೋರ್ಟಿಗೆ ಹಾಜರಾಗಲು ಸೂಚನೆ ನೀಡಿದ್ದರೂ, ಹಾಜರಾಗಿರಲಿಲ್ಲ. ಇನ್ನು ನಿನ್ನೆ ಹರ್ಯಾಣ ಸರ್ಕಾರ ಕೂಡ, ಆಶ್ರಮದಿಂದ ತೆರವು ಮಾಡುವತೆ ಬಾಬಾ ಭಕ್ತರಿಗೆ ಸೂಚನೆ ನೀಡಿತ್ತು.

ಇದೀಗ ಹರ್ಯಾಣ- ದೆಹಲಿ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಹಿಂಸಾಚಾರದಲ್ಲಿ ಮಾಧ್ಯಮದ ವ್ಯಕ್ತಿಗಳ ಮೇಲೂ ಪೆಟ್ಟು ಬಿದ್ದಿದೆ.
ಈ ನಡುವೆ, ಸಿಎಂ ಮನೋಹರ್ ಲಾಲ್ ಖಟ್ಟರ್, ಹಿಸ್ಸಾರ್ ಘಟನೆಗೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳ ಜೊತೆ ಮಅತನಾಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದಾರೆ.

Buy Now on CodeCanyon