TV9 News: Tamil Nadu Chief Minister Panneerselvam To Face First Assembly Session 'Today'....., <br /> <br />ಜಯಲಲಿತಾ ಅವರಿಗೆ ಜೈಲು ಶಿಕ್ಷೆ ನಂತರ ರಚನೆಯಾದ ಪನ್ನೀರ್ ಸೆಲ್ವಂ ಸರ್ಕಾರದ ಮೊದಲ ವಿಧಾನಸಭಾ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಈ ಎರಡು ತಿಂಗಳಲ್ಲಿ ತಮಿಳುನಾಡಿನಲ್ಲಾದ ಅನೇಕ ಬೆಳವಣಿಗೆಗಳು, ಕಾನೂನು ಸುವ್ಯವಸ್ಥೆ ಪರಿಸ್ಥಿತಿ, ಕಾವೇರಿ ಮೇಕೆದಾಟು ಯೋಜನೆ, ಮುಲ್ಲೈಪೆರಿಯಾರ್ ಸಮಸ್ಯೆ , ಶ್ರೀಲಂಕಾದಲ್ಲಿ ಸೆರೆಯಾಗುತ್ತಿರುವ ತಮಿಳು ಮೀನುಗಾರರು ಸೇರಿದಂತೆ ಹಲವು ವಿಷಯಗಳಲ್ಲಿ ಪನ್ನೀರ್ ಸೆಲ್ವಂ ಸರ್ಕಾರ ಪ್ರತಿ ಪಕ್ಷಗಳಿಂದ ಪ್ರಶ್ನೆಗಳನ್ನ ಎದುರಿಸಲಿವೆ. ಇನ್ನೂ ಹಾಲಿನ ದರ ಏರಿಕೆ, ವಿದ್ಯುತ್ ದರ ಏರಿಕೆ ವಿಷಯಗಳು, ಜಯಾ ಹೆಸರಿನ ಯೋಜನೆಗಳ ಮುಂದುವರಿಕೆ ಬಗ್ಗೆ ಅಧಿವೇಷನದಲ್ಲಿ ಚೆರ್ಚೆ ನಡೆಯಲಿವೆ. <br />…...................... <br />ಇನ್ನು ಅಧಿವೇಶನದ ಕಾಲಾವಧಿ ಕೇವಲ ಮೂರು ದಿನಕ್ಕೆ ಮಾತ್ರ ನಿರ್ಧರಿಸಲಾಗಿದೆ. ಇವತ್ತು ನಾಳೆ ಹಾಗೂ ಸೋಮವಾರ ಸೇರಿದಂತೆ ಮೂರು ದಿನ ಮಾತ್ರ ಕಲಾಪ ನಡೆಯಲಿದೆ. ಕಲಾಪದ ಮೂರು ದಿನಗಳಲ್ಲಿ ಎರಡು ದಿನ ಸರ್ಕಾರದ ಹೆಚ್ಚುವರಿ ಬಜೆಟ್ ಪ್ರಸ್ತಾವನೆ , ಮತ್ತು ಸರ್ಕಾರದ ಮಸೂದೆ ಮಂಡನೆಗಳಿಗೆ ಮೀಸಲಿಡಲಾಗಿದೆ