TV9 News: Arkavathy Land Denotification Issue To Rock Assembly Session 'Today'...., <br /> <br />ಇವತ್ತಿನಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಅಸಲಿ ಅಗ್ನಿಪರೀಕ್ಷೆ ಶುರು ಆಗಲಿದೆ. ಇವತ್ತು ಬೆಳಗ್ಗೆ 11 ಗಂಟೆಗೆ ವಿಧಾನ ಮಂಡಲ ಕಲಾಪ ಆರಂಭಗೊಳ್ಳಲಿದೆ. ಇಂದು ಅರ್ಕಾವತಿ ಡಿ ನೋಟಿಫಿಕೇಶನ್ ಹಗರಣ ಕುರಿತು ಸರ್ಕಾರದ ವಿರುದ್ಧ ನಿಲುವಳಿ ಸೂಚನೆ ಮಂಡಿಸಲು ಬಿಜೆಪಿ ಮುಖಂಡರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಜೆಡಿಎಸ್ ಸಹ ಸಾಥ್ ನೀಡುವ ಸುಳಿವು ಸಿಕ್ಕಿದೆ. <br /> <br />ಇನ್ನ ಪರಿಷತ್ನಲ್ಲಿ, ವಿದ್ಯುತ್ ಮೀಟರ್ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಎಸಗಿದ್ದಾರೆ ಎನ್ನಲಾದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಗರಣವನ್ನು ಚರ್ಚಿಸಲು ಬಿಜೆಪಿ ಪ್ರತಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಸಜ್ಜಾಗಿದ್ದಾರೆ. ಇದಕ್ಕಾಗಿ ಸಭಾಪತಿ ಶಂಕರಮೂರ್ತಿ ಅವರನ್ನ, ‘ಗಮನ ಸೆಳೆಯುವ ಸೂಚನೆ’ ಅಡಿ ಚರ್ಚೆಗೆ ಅವಕಾಶ ಸಹ ಕೋರಲಿದ್ದಾರೆ ಎನ್ನಲಾಗಿದೆ.