There is a big twist in 'Lakshmi Baramma' episode tomorrow (June 8th). Don't miss to watch 'Lakshmi Baramma' in Colors Kannada tomorrow. <br />ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ಬಾರಮ್ಮ' ಕೂಡ ಒಂದು. ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ಪ್ರತಿಯೊಬ್ಬ ಪಾತ್ರಧಾರಿಯೂ ಕರ್ನಾಟಕದ ಮೂಲೆ ಮೂಲೆಯಲ್ಲೂ ಜನಪ್ರಿಯ. ಅದರಲ್ಲೂ, ಚಂದು, ಗೊಂಬೆ ಹಾಗೂ ಲಚ್ಚಿ ಯಾರಿಗೂ ಗೊತ್ತಿಲ್ಲ ಎನ್ನುವ ಹಾಗೇ ಇಲ್ಲ.! ಅಷ್ಟರಮಟ್ಟಿಗೆ ಈ ಸೀರಿಯಲ್ ಫೇಮಸ್. ಇಲ್ಲಿಯವರೆಗೂ, 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಒಂದು ದೊಡ್ಡ ಸೀಕ್ರೆಟ್ ಮೇನ್ಟೇನ್ ಮಾಡಲಾಗಿತ್ತು. ಲಚ್ಚಿ ಕೊರಳಿಗೆ ಚಂದು ತಾಳಿ ಕಟ್ಟಿದ್ದರೂ, ಆ ಸತ್ಯ ಚಂದು ಪತ್ನಿ ಗೊಂಬೆಗೆ ತಿಳಿದಿರಲಿಲ್ಲ. ಇಷ್ಟು ದಿನ ಗೊಂಬೆ ಪಾಲಿಗೆ ಗುಟ್ಟಾಗಿ ಉಳಿದಿದ್ದ ಈ ವಿಚಾರ ಈಗ ರಟ್ಟಾಗಲಿದೆ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಗೆ ನಾಳೆ ದೊಡ್ಡ ಟ್ವಿಸ್ಟ್ ಸಿಗಲಿದೆ.