ಮುಂದಿನ ಕೇಂದ್ರ ಬಜೆಟ್ ಅಧಿವೇಶನದಲ್ಲಿ ಗ್ರಾಚ್ಯುಟಿ ತಿದ್ದುಪಡಿ ಮಸೂದೆ 2017ಕ್ಕೆ ಅಂಗೀಕಾರ ಸಿಗುವ ಸಾಧ್ಯತೆ ಇದೆ. ಇದರಿಂದಾಗಿ ಉದ್ಯೋಗಿಗಳಿಗೆ 20 ಲಕ್ಷ ರೂ.ವರೆಗೂ ತೆರಿಗೆ ಮುಕ್ತ ಗ್ರಾಚ್ಯುಟಿ ಪಡೆಯಲು ಅರ್ಹರಾಗಲಿದ್ದಾರೆ.

ಸದ್ಯ ಐದು ಅಥವಾ ಅದಕ್ಕಿಂತ ಹೆಚ್ಚು ಸೇವಾ ಅವಧಿ ಹೊಂದಿರುವ ಉದ್ಯೋಗಿಗಳು ಉದ್ಯೋಗ ತೊರೆದಾಗ, ನಿವೃತ್ತಿ ಹೊಂದಿದಾಗ 10 ಲಕ್ಷ ರೂ. ವರೆಗೂ ತೆರಿಗೆ ಮುಕ್ತವಾಗಿ ಗ್ರಾಚ್ಯುಟಿ ಗಳಿಸಬಹುದಾಗಿದೆ. ಇಷ್ಟಕ್ಕೂ ಗ್ರಾಚ್ಯುಟಿ ಎಂದರೇನು? ಇದರ ಲೆಕ್ಕ ಹಾಕುವುದು ಹೇಗೆ?

ಉದ್ಯೋಗದಾತರಿಂದ ಉದ್ಯೋಗಿಗಳಿಗೆ ಸಿಗುವ ಕೊಡುಗೆಗಳಲ್ಲಿ ಗ್ರಾಚ್ಯುಟಿ ಕೂಡಾ ಒಂದಾಗಿದೆ. ಗ್ರಾಚ್ಯುಟಿ ಅಧಿನಿಯಮದ ಪ್ರಕಾರ ಉದ್ಯೋಗಿ ನಿವೃತ್ತಿ ಹೊಂದಿದ 1 ತಿಂಗಳ ಒಳಗಾಗಿ ಕಡ್ಡಾಯವಾಗಿ ಗ್ರಾಚ್ಯುಟಿ ಹಣವನ್ನು ಪಾವತಿಸಬೇಕಾಗುತ್ತದೆ.

ಉದ್ಯೋಗಿ ತನ್ನ ವೃತ್ತಿ ಬದುಕಿನಲ್ಲಿ ಹಲವಾರು ಬಾರಿ ಉದ್ಯೋಗ ಬದಲಾಯಿಸಬೇಕಾಗುತ್ತದೆ. ಗ್ರಾಚ್ಯುಟಿ ಪಡೆದು ಉದ್ಯೋಗ ತೊರೆಯಬಹುದಾಗಿದೆ.
What is Gratuity? How to calculate Gratuity of Employee? Gratuity is a part of the benefits that an employee receives from the employee, who has completed 5 years of continuous service.