ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಸದ್ಯ ಕನ್ನಡ ಸಿನಿಮಾರಂಗದ ಪ್ರೇಮ ಪಕ್ಷಿಗಳು. ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡ ನಂತರ ರಕ್ಷಿತ್ ಮತ್ತು ರಶ್ಮಿಕಾ ತಮ್ಮದೇ ಪ್ರಪಂಚದಲ್ಲಿ ಓಡಾಡಿಕೊಂಡಿದ್ದಾರೆ. ಇತ್ತಿಚಿಗಷ್ಟೇ ಬೈಕ್ ರೈಡ್ ಹೋಗಿ ಬಂದು ತಮ್ಮ ಅನುಭವವನ್ನ ಅಭಿಮಾನಿಗಳ ಮುಂದೆ ಹಂಚಿಕೊಂಡಿತ್ತು ಈ ಜೋಡಿ. ಸಿಂಪಲ್ ಸ್ಟಾರ್ ರಕ್ಷಿತ್ ತನ್ನ ಮನದೊಡತಿಗೆ ವಿಶೇಷವಾದ ಗಿಫ್ಟ್ ನೀಡಿದ್ದಾರೆ.

ಹೊಸ ವರ್ಷಕ್ಕೆ ಪುಟ್ಟ ಬೆಕ್ಕನ್ನ ನೀಡಿರುವ ರಕ್ಷಿತ್ ಅದಕ್ಕೆ ಸಿಂಭ ಎಂದು ನಾಮಕರಣವನ್ನೂ ಮಾಡಿದ್ದಾರೆ.ರಶ್ಮಿಕಾ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ ಅಂತೆ. ಅದೇ ಕಾರಣಕ್ಕೆ ರಕ್ಷಿತ್ ಬೆಕ್ಕನ್ನ ಉಡುಗೊರೆಯಾಗಿ ನೀಡಿದ್ದಾರೆ.

ರಶ್ಮಿಕಾ ಎಲ್ಲಿ ಹೋದರು ಅದನ್ನ ಜೊತೆಯಲ್ಲೇ ಕರೆದುಕೊಂಡು ಹೋಗುತ್ತಾರಂತೆ.ಸದ್ಯ ರಶ್ಮಿಕಾ 'ಚಲೋ' ಚಿತ್ರದ ಪ್ರಮೋಷನ್ ಗಾಗಿ ಹೈದ್ರಾಬಾದ್ ಹೊರಟಿದ್ದು ಅಲ್ಲಿಗೂ ಸಿಂಭವನ್ನ ಕರೆದುಕೊಂಡು ಹೋಗುತ್ತಿದ್ದಾರಂತೆ.

Rakshith shetty and Rashmika Mandanna are the new love birds of Sandalwood and recently Rakshith Shetty gifted a cat to his lady and has named it Simba .