On Gauri day in Bengaluru on Monday freedom fighter HS Doreswamy, Actor Prakash Rai and others express their angry against BJP and prime minister Narendra Modi.

ಗೌರಿ ಅಮರ್ ರಹೇ ಅಮರ್ ರಹೇ , ನಾನು ಗೌರಿ, ನಾನು ಗೌರಿ' ಎಂಬ ಘೋಷಣೆಗಳು ಮೊಳಗಿದವು. ಸಂವಿಧಾನ ಬೋಧನೆಯ ಪ್ರಮಾಣ ಬೋಧಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಸೋಮವಾರ ಆಯೋಜಿಸಿರುವ ಗೌರಿ ದಿನ ಸಮಾವೇಶದಲ್ಲಿ.

ಶಾಸಕ ಜಿಗ್ನೇಶ್ ಮೇವಾನಿ, ಕನ್ಹಯ್ಯಕುಮಾರ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ , ಕವಿತಾ ಲಂಕೇಶ್, ನಟ ಪ್ರಕಾಶ್ ರೈ, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು, ವಿಮರ್ಶಕ ರಹಮತ್ ತರೀಕರೆ, ಬರಹಗಾರ್ತಿ ಕೆ.ನೀಲಾ ಸೇರಿದಂತೆ ಹಲವರು ಭಾಗಿಯಾದರು.

ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅವರು ಪ್ರಧಾನಿ ನರೇಂದ್ರ್ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗೌರಿ ಲಂಕೇಶ್ ಬಗ್ಗೆ ಬರೆದಿರುವ ಪುಸ್ತಕವನ್ನು ಒಂದು ಲಕ್ಷ ರುಪಾಯಿ ಕೊಟ್ಟು ಖರೀದಿಸುತ್ತೇನೆ ಎಂದು ಪ್ರಕಾಶ್ ರೈ ಅವರು ಘೋಷಿಸಿದರು. ಈ ಸಮಾವೇಶದಲ್ಲಿ ಹಲವರು ಮಾತನಾಡಿದರು.