Saalumarada Thimmakka honored with Padma award in Rashtrapathi Bhavan. Mother Of Trees" Blessed President Ram Nath Kovind<br /><br /> ಶನಿವಾರ (ಮಾ 16) ದೆಹಲಿಯ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ದೇಶದ ಅತ್ಯುನ್ನತ 'ಪದ್ಮ ಪ್ರಶಸ್ತಿ' ವಿತರಣಾ ಸಮಾರಂಭ, ಕಿಕ್ಕಿರಿದು ತುಂಬಿದ ಸಭಾಂಗಣ. ಮೊದಲ ಸಾಲಿನಲ್ಲಿ ಪ್ರಧಾನಿ ಮೋದಿ, ಗೃಹಸಚಿವ ರಾಜನಾಥ್ ಸಿಂಗ್ ಆದಿಯಾಗಿ ಕ್ಯಾಬಿನೆಟ್ ಸಚಿವರು ಆಸೀನರಾಗಿದ್ದರು. ತಮ್ಮವರು ಪ್ರಶಸ್ತಿ ಸ್ವೀಕರಿಸುವ ಅಪೂರ್ವ ಗಳಿಗೆಯನ್ನು ಕಣ್ತುಂಬಿಸಿಕೊಳ್ಳಲು ಕುಟುಂಬದ ಸದಸ್ಯರೂ ಹಾಜರಿದ್ದರು. ತೀರಾ ಅಪರೂಪದ ಘಟನೆ ಎನ್ನುವಂತೆ, ಪ್ರಶಸ್ತಿ ಸ್ವೀಕರಿಸಿದ ಸಾಲುಮರದ ತಿಮ್ಮಕ್ಕ ರಾಷ್ಟ್ರಪತಿಗಳ ತಲೆಗೆ ಕೈಯಿಟ್ಟು ಆಶೀರ್ವದಿಸಿದರು, ರಾಮನಾಥ್ ಕೋವಿಂದ್ ಅಷ್ಟೇ ಗೌರವದಿಂದ ಶಿರಬಾಗಿ ತಿಮ್ಮಕ್ಕನಿಗೆ ನಮಸ್ಕರಿಸಿದರು. ಪ್ರಧಾನಿಯಾದಿಯಾಗಿ, ಈ ವಿದ್ಯಮಾನಕ್ಕೆ ಸಾಕ್ಷಿಯಾದವರು ಭಾರೀ ಕರತಾಡನದೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.<br />