Telugu Super Star, Hindupur MLA Nandamuri Balakrishna is very sentimental about a Room no 9 during the counting day. He is preparing for Assembly Election results 2019 to be declared on May 23(Thursday) along with Lok Sabha elections 2019.<br /><br />ಲೋಕಸಭೆ ಚುನಾವಣೆ ಜೊತೆಗೆ ಆಂಧ್ರಪ್ರದೇಶದಲ್ಲಿ 15ನೇ ವಿಧಾನಸಭೆಗಾಗಿ ಕೂಡಾ ಚುನಾವಣೆ ನಡೆಸಲಾಯಿತು. ಸ್ಟಾರ್ ನಟ, ನಟಿಯರು, ಸೆಲೆಬ್ರಿಟಿಗಳನ್ನು ಹೊಂದಿರುವ ಚುನಾವಣೆಯ ಫಲಿತಾಂಶ ಮೇ 23ರಂದು ಹೊರಬರಲಿದೆ. ರಾಯಲಸೀಮೆಯ ಅನಂತಪುರ ಜಿಲ್ಲೆಯ ಕರ್ನಾಟಕ ಗಡಿಭಾಗದ ಹಿಂದೂಪುರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಪ್ರತಿ ಬಾರಿಯಂತೆ ಈ ಬಾರಿಯೂ ಕುತೂಹಲ ಕೆರಳಿಸಿದೆ. ತೆಲುಗಿನ ಸೂಪರ್ ಸ್ಟಾರ್ ನಟ, ಹಾಲಿ ಶಾಸಕ ನಂದಮೂರಿ ಬಾಲಕೃಷ್ಣ(ಬಾಲಯ್ಯ) ಅವರ ಚುನಾವಣಾ ಭವಿಷ್ಯ ನಿರ್ಧಾರವಾಗಲಿದೆ.<br />
