ಕರೋನಾ ವೈರಸ್ ಹಿನ್ನೆಲೆಯಲ್ಲಿ ಹೋಂಡಾ ಕಾರ್ಸ್ ಇಂಡಿಯಾ ಹೊಸದಾಗಿ ಮನೆ ಬಾಗಿಲಲ್ಲಿ ವಾಹನಗಳ ಸರ್ವಿಸ್ ಮಾಡುವ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಿಂದಾಗಿ ಗ್ರಾಹಕರು ತಮ್ಮ
ವಾಹನಗಳನ್ನು ಸರ್ವಿಸ್ ಮಾಡಿಸಲು ಶೋರೂಂಗಳಿಗೆ ಭೇಟಿ ನೀಡುವ ಬದಲು ಮನೆ ಬಾಗಿಲಲ್ಲೆ ತಮ್ಮ ವಾಹನಗಳನ್ನು ಸರ್ವೀಸ್ ಮಾಡಿಸಿಕೊಳ್ಳಬಹುದು.

ಹೋಂಡಾದ ವೆಹಿಕಲ್ ಮೆಂಟೆನೆನ್ಸ್ ಪ್ರೋಗ್ರಾಂ ಗ್ರಾಹಕರ ವಾಹನಗಳು ಮನೆ ಬಾಗಿಲಲ್ಲೆ ಸರ್ವೀಸ್ ಆದರೂ ಸರಾಗವಾಗಿ ಚಲಿಸುವುದನ್ನು
ಖಾತ್ರಿಗೊಳಿಸುತ್ತದೆ. ಲಾಕ್‌ಡೌನ್ ಕಾರಣದಿಂದಾಗಿ ಬಹುತೇಕ ಕಾರುಗಳು ದೀರ್ಘಕಾಲದವರೆಗೆ ನಿಂತಲ್ಲೆ ನಿಂತಿದ್ದವು. ಈ ಕಾರಣಕ್ಕೆ ಅವುಗಳನ್ನು
ಬಳಸುವ ಮೊದಲು ಮೆಂಟೆನೆನ್ಸ್ ಮಾಡುವ ಅಗತ್ಯವಿರುತ್ತದೆ.