ಟ್ರಯಂಫ್ ಮೋಟರ್‌ಸೈಕಲ್ ತನ್ನ ಬೊನೆವೆಲ್ಲಿ ಸರಣಿಯ ಟಿ 100 ಹಾಗೂ ಟಿ 120 ಬೈಕ್‌ಗಳ ಬ್ಲ್ಯಾಕ್-ಎಡಿಷನ್ ಮಾದರಿಗಳನ್ನು ಬಿಡುಗಡೆಗೊಳಿಸಿದೆ. ಟ್ರಯಂಫ್ ಬೊನೆವೆಲ್ಲಿ ಟಿ 100 ಬ್ಲ್ಯಾಕ್ ಎಡಿಷನ್ ಮತ್ತು ಟಿ 120 ಬ್ಲ್ಯಾಕ್ ಎಡಿಶನ್ ಬೈಕ್‌ಗಳ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ಕ್ರಮವಾಗಿ ರೂ.8.87 ಲಕ್ಷ ಹಾಗೂ ರೂ.9.97 ಲಕ್ಷಗಳಾಗಿದೆ.

ಎರಡೂ ಬೈಕ್‌ಗಳು ಕಪ್ಪು ಬಣ್ಣವನ್ನು ಹೊಂದಿವೆ. ಈ ಬೈಕ್‌ಗಳಲ್ಲಿ ಹಲವಾರು ಕಾಸ್ಮೆಟಿಕ್ ಬದಲಾವಣೆ ಹಾಗೂ ಅಪ್‌ಡೇಟ್‌ಗಳನ್ನು ಮಾಡಲಾಗಿದೆ.
ಕಪ್ಪು ಬಣ್ಣವು ಈ ಬೈಕ್‌ಗಳಿಗೆ ಆಧುನಿಕ ಕ್ಲಾಸಿಕ್ ಲುಕ್ ನೀಡುತ್ತವೆ.

ಈ ಎರಡೂ ಬೈಕ್‌ಗಳಲ್ಲಿರುವ ರೇರ್‌ವೀವ್ ಮಿರರ್, ಹೆಡ್‌ಲ್ಯಾಂಪ್ ಬೆಜೆಲ್, ಟರ್ನ್ ಇಂಡಿಕೇಟರ್, ಎಂಜಿನ್, ವ್ಹೀಲ್ ಮತ್ತು ಬಾಡಿವರ್ಕ್‌ಗಳು ಕಪ್ಪು ಬಣ್ಣವನ್ನು ಹೊಂದಿವೆ. ಟ್ರಯಂಫ್ ಬೊನೆವೆಲ್ಲಿ ಟಿ 100 ಬೈಕ್ ಮ್ಯಾಟ್ ಬ್ಲ್ಯಾಕ್ ಅಥವಾ ಗ್ಲೋಸ್ ಬ್ಲ್ಯಾಕ್ ಬಣ್ಣವನ್ನು ಹೊಂದಿದ್ದರೆ, ಟಿ 120 ಬೈಕ್ ಮ್ಯಾಟ್ ಗ್ರ್ಯಾಫೈಟ್ ಬಣ್ಣವನ್ನು ಹೊಂದಿದೆ.