ಹೀರೋ ಮೊಟೊಕಾರ್ಪ್ ತನ್ನ ಬಹು ನಿರೀಕ್ಷಿತ ಎಕ್ಟ್ರೀಮ್ 160 ಆರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
ಹೊಸ ಹೀರೋ ಎಕ್ಟ್ರೀಮ್ 160 ಆರ್ ಬೈಕ್ ಅನ್ನು ಫ್ರಂಟ್ ಡಿಸ್ಕ್ ಹಾಗೂ ಡಬಲ್ ಡಿಸ್ಕ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಹೀರೋ ಎಕ್ಟ್ರೀಮ್ 160 ಆರ್ ಫ್ರಂಟ್ ಡಿಸ್ಕ್ ಮಾದರಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ 99,950 ರೂಪಾಯಿಗಳಾದರೆ,
ಟಾಪ್ ಎಂಡ್ ಮಾದರಿಯಾದ ಡಬಲ್ ಡಿಸ್ಕ್ ಬೈಕಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ 1.03 ಲಕ್ಷ ರೂಪಾಯಿಗಳಾಗಿದೆ.

ಹೀರೋ ಎಕ್ಟ್ರೀಮ್ 160 ಆರ್ ಬೈಕ್ ಅನ್ನು 2019 ಇಐಸಿಎಂಎದಲ್ಲಿ ಪ್ರದರ್ಶಿಸಲಾಗಿದ್ದ ಕಂಪನಿಯ 1 ಆರ್ ಕಾನ್ಸೆಪ್ಟ್ ನಿಂದ ತಯಾರಿಸಲಾಗಿದೆ.