ಕಳೆದ ನಾಲ್ಕು ತಿಂಗಳಲ್ಲಿ ತನ್ನ ವಾಹನಗಳ ಡಿಜಿಟಲ್ ವಹಿವಾಟು ಹೆಚ್ಚಾಗಿದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿದೆ. ಲಾಕ್ ಡೌನ್ ಅವಧಿಯಲ್ಲಿ ಡಿಜಿಟಲ್ ವಿಚಾರಣೆಯಲ್ಲಿ 45%ನಷ್ಟು ಬೆಳವಣಿಗೆ ದಾಖಲಾಗಿದೆ ಎಂದು ಕಂಪನಿ ಹೇಳಿದೆ.

ಕಾರು ಖರೀದಿಸುವಾಗ ಗ್ರಾಹಕರು ಸಾಗುವ ಎಲ್ಲಾ ಟಚ್ ಪಾಯಿಂಟ್‌ಗಳನ್ನು ಕಂಪನಿಯು ಡಿಜಿಟಲೀಕರಣಗೊಳಿಸುತ್ತಿದೆ. ಸದ್ಯಕ್ಕೆ
26 ಟಚ್ ಪಾಯಿಂಟ್‌ಗಳ ಪೈಕಿ 21 ಟಚ್ ಪಾಯಿಂಟ್‌ಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.

ಮಾರುತಿ ಸುಜುಕಿ ಹಣಕಾಸು ಮಾರುಕಟ್ಟೆಗೆ ಡಿಜಿಟಲ್ ರೂಪ ನೀಡಲು ಪೈಲಟ್ ಯೋಜನೆಯನ್ನು ಆರಂಭಿಸಿದೆ. ಇದರಿಂದಾಗಿ
ಗ್ರಾಹಕರು ಎಲ್ಲಾ ಹಣಕಾಸು ಆಯ್ಕೆಗಳನ್ನು ಡಿಜಿಟಲ್ ಸ್ವರೂಪದಲ್ಲಿ ಪಡೆಯಬಹುದು.