ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು 2021ರ ಜನವರಿ 1ರಿಂದ ದೇಶಾದ್ಯಂತವಿರುವ ಎಲ್ಲಾ ನಾಲ್ಕು ಚಕ್ರ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಅನ್ನು ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದೆ.

ಇದರಿಂದಾಗಿ 2017ರ ಡಿಸೆಂಬರ್ 1 ಹಾಗೂ ಅದಕ್ಕಿಂತ ಮೊದಲು ಮಾರಾಟವಾದ ಎಲ್ಲಾ ಹಳೆಯ ವಾಹನಗಳು ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್ ಗಳನ್ನು ಹೊಂದಬೇಕಾಗುತ್ತದೆ. 1989ರ ಮೋಟಾರು ವಾಹನ ಕಾಯ್ದೆಯ ಅನ್ವಯ ರಿಜಿಸ್ಟ್ರೇಷನ್ ಸಮಯದಲ್ಲಿಯೇ ಎಲ್ಲಾ ನಾಲ್ಕು ಚಕ್ರ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಹಳೆಯ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್‌ನ ಫಿಟ್‌ಮೆಂಟ್‌ಗಳನ್ನು ಅಳವಡಿಸಿದರೆ ಮಾತ್ರ ಫಿಟ್‌ನೆಸ್ ಸರ್ಟಿಫಿಕೇಟ್ ನೀಡಲಾಗುತ್ತದೆ. 2021ರ ಏಪ್ರಿಲ್ 1ರಿಂದ ಹೊಸದಾಗಿ ನಾಲ್ಕು ಚಕ್ರ ವಾಹನಗಳಿಗೆ ಥರ್ಡ್ ಪಾರ್ಟಿ ಇನ್ಶ್ಯೂರೆನ್ಸ್ ಮಾಡಿಸುವ ವೇಳೆ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ.

ಫಾಸ್ಟ್‌ಟ್ಯಾಗ್ ಗೆ ಸಂಬಂಧಿಸಿದ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.