Surprise Me!

ಸಿವಿಕ್ ಸೆಡಾನ್ ಹಾಗೂ ಸಿಆರ್-ವಿ ಎಸ್‌ಯುವಿಯನ್ನು ಸ್ಥಗಿತಗೊಳಿಸಲು ಮುಂದಾದ ಹೋಂಡಾ ಕಾರ್ಸ್

2020-12-24 1,112 Dailymotion

ಭಾರತದಲ್ಲಿ ಸಿವಿಕ್ ಸೆಡಾನ್ ಹಾಗೂ ಸಿಆರ್-ವಿ ಎಸ್‌ಯುವಿಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತಿಳಿಸಿದೆ.

ಕಂಪನಿಯು ತನ್ನ ಗ್ರೇಟರ್ ನೋಯ್ಡಾ ಉತ್ಪಾದನಾ ಘಟಕದಲ್ಲಿ ವಾಹನ ಉತ್ಪಾದನೆಯನ್ನು ಸ್ಥಗಿತಗೊಳಿಸಿ, ಸಂಪೂರ್ಣ ಉತ್ಪಾದನಾ ಘಟಕವನ್ನು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತಪುಕರ ಘಟಕಕ್ಕೆ ಸ್ಥಳಾಂತರಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದೆ.

ಆದರೆ ಹೆಡ್ ಆಫೀಸ್ ಕಾರ್ಯಗಳು, ಇಂಡಿಯಾ ಆರ್ ಅಂಡ್ ಡಿ ಸೆಂಟರ್, ಆಟೋಮೊಬೈಲ್ ಸೇರಿದಂತೆ ಇನ್ನಿತರ ಕಾರ್ಯಾಚರಣೆಗಳು ಗ್ರೇಟರ್ ನೋಯ್ಡಾದಲ್ಲಿಯೇ ಮುಂದುವರೆಯಲಿವೆ.

ಲಾಕ್‌ಡೌನ್ ನಂತರ ಕಾರ್ಯಾಚರಣೆಗಳು ಪೂರ್ತಿಯಾಗಿ ಪುನರಾರಂಭಗೊಂಡ ನಂತರ, ಕಂಪನಿಯು ತನ್ನ ಉತ್ಪಾದನಾ ಪ್ರಮಾಣವನ್ನು ಕೋವಿಡ್ ಅವಧಿಗೂ ಮುನ್ನವಿದ್ದ ಮಟ್ಟಕ್ಕೆ ಕೊಂಡೊಯ್ದಿದೆ.

Buy Now on CodeCanyon