ನಿಸ್ಸಾನ್ ಮ್ಯಾಗ್ನೈಟ್ ಕಾಂಪ್ಯಾಕ್ಟ್-ಎಸ್‌ಯುವಿಯನ್ನು ಡಿಸೆಂಬರ್ 2ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಎಸ್‌ಯುವಿಯು ಬಿಡುಗಡೆಯಾದಾಗಿನಿಂದ ದಿನಕ್ಕೆ ಸರಾಸರಿ 1,000 ಬುಕ್ಕಿಂಗ್ ಗಳನ್ನು ದಾಖಲಿಸಿದ್ದು, ಈಗಾಗಲೇ ಈ ಎಸ್‌ಯುವಿಯು 30,000ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಸ್ವೀಕರಿಸಿದೆ ಎಂದು ಹೇಳಲಾಗಿದೆ.

ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.4.99 ಲಕ್ಷಗಳಾಗಿದೆ. ಈ ಎಸ್‌ಯುವಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಕೆಲವು ಡೀಲರ್ ಗಳು ಹೊಸ ಬುಕಿಂಗ್ ಸ್ವೀಕರಿಸುವುದನ್ನು ನಿಲ್ಲಿಸಿದ್ದಾರೆ ಎಂದು ವರದಿಗಳಾಗಿವೆ.

ಮ್ಯಾಗ್ನೈಟ್ 2020ರಲ್ಲಿ ಹೆಚ್ಚು ಬುಕ್ ಮಾಡಿದ ವಾಹನಲಾದ ವಾಹನ ಎಂಬ ಹೆಗ್ಗಳಿಕೆಯನ್ನು ಸಹ ಪಡೆದಿದೆ.

ನಿಸಾನ್ ಮ್ಯಾಗ್ನೈಟ್ ಕಾಂಪ್ಯಾಕ್ಟ್ ಎಸ್‌ಯುವಿ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.