ಇತ್ತೀಚಿನ ದಿನಗಳಲ್ಲಿ ಬಹುದೊಡ್ಡ ಅಭಿಯಾನ ಎಂದೇ ಕರೆಯಲ್ಪಟ್ಟ ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣದ ನಿಧಿ ಅಭಿಯಾನದ ದಕ್ಷಿಣ ಭಾರತದ ನೇತೃತ್ವ ವಹಿಸಿಕೊಂಡಿದ್ದ ಉಡುಪಿ ಪೇಜಾವರ ಮಠದ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು, ಒನ್ ಇಂಡಿಯಾ ಜೊತೆಗಿನ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. <br />ನಿಧಿ ಅಭಿಯಾನದ ವೇಳೆ ಕೆಲವು ರಾಜಕೀಯ ಮುಖಂಡರ ನೀಡಿದ ಹೇಳಿಕೆಯ ಬಗ್ಗೆಯೂ ಶ್ರೀಗಳು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇದರ ಜೊತೆಗೆ, ಪೇಜಾವರ ಹಿರಿಯ ಶ್ರೀಗಳ ಸ್ಮರಣಾರ್ಥ ಸ್ಮೃತಿವನ ನಿರ್ಮಾಣದ ವಿಚಾರವನ್ನೂ ಪ್ರಸ್ತಾವಿಸಿದ್ದಾರೆ.