ಬೆನೆಲ್ಲಿ ತನ್ನ ಹೊಸ ಟಿಆರ್‌ಕೆ 502 ಎಕ್ಸ್ ಅಡ್ವೆಂಚರ್-ಟೂರರ್ ಬಿಎಸ್ 6 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಬೆನೆಲ್ಲಿ ಟಿಆರ್‌ಕೆ 502 ಎಕ್ಸ್ ಬೈಕಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.5.19 ಲಕ್ಷಗಳಾಗಿದೆ. <br /><br />ಬೆನೆಲ್ಲಿ ಟಿಆರ್‌ಕೆ 502 ಎಕ್ಸ್ ಬೈಕ್ ಅನ್ನು ಬೆನೆಲ್ಲಿ ರೆಡ್, ಪ್ಯೂರ್ ವೈಟ್ ಹಾಗೂ ಮೆಟಾಲಿಕ್ ಡಾರ್ಕ್ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹೊಸ ಬೆನೆಲ್ಲಿ ಟಿಆರ್‌ಕೆ 502 ಎಕ್ಸ್ ಅಡ್ವೆಂಚರ್-ಟೂರರ್ ಬೈಕಿನಲ್ಲಿ ಅಳವಡಿಸಿರುವ 499 ಸಿಸಿಯ ಟ್ವಿನ್ ಪ್ಯಾರಾಲೆಲ್ ಬಿಎಸ್ 6 ಎಂಜಿನ್ 8500 ಆರ್‌ಪಿಎಂನಲ್ಲಿ 46.8 ಬಿಹೆಚ್‌ಪಿ ಪವರ್ ಹಾಗೂ 6000 ಆರ್‌ಪಿಎಂನಲ್ಲಿ 46 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ<br /> <br />ಹೊಸ ಟಿಆರ್‌ಕೆ 502 ಎಕ್ಸ್ ಅಡ್ವೆಂಚರ್-ಟೂರರ್ ಬಿಎಸ್ 6 ಬೈಕ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.