ಬಹು ನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿ ಆಫ್-ರೋಡ್ ಎಸ್‌ಯುವಿಯನ್ನು 2022ರ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಬಿಡುಗಡೆಗೂ ಮುನ್ನ 5 ಡೋರುಗಳ ಈ ಎಸ್‌ಯುವಿಯನ್ನು 2022ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸುವ ನಿರೀಕ್ಷೆಗಳಿವೆ.

ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಕಂಪನಿಯು ಜಿಮ್ನಿ ಎಸ್‌ಯುವಿಯ ಮೂರು ಡೋರು ಹಾಗೂ ಐದು ಡೋರುಗಳ ಆವೃತ್ತಿಯನ್ನು ಅನಾವರಣಗೊಳಿಸುವ ಸಾಧ್ಯತೆಗಳಿವೆ.

ಮಾರುತಿ ಸುಜುಕಿ ಕಂಪನಿಯು ಭಾರತೀಯ ಗ್ರಾಹಕರಿಗಾಗಿ ಜಿಮ್ನಿ ಎಸ್‌ಯುವಿಯ 5 ಡೋರುಗಳ ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಲಾಗಿದೆ.

ಜಿಮ್ನಿ ಆಫ್-ರೋಡ್ ಎಸ್‌ಯುವಿಯ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.