I Want To Get Married Soon, Says Kannada Rapper #ChandanShetty.

ಬೆಂಗಳೂರು: ಬಿಗ್ ಬಾಸ್ ಸೀಸನ್-5ರ ವಿನ್ನರ್ ಹಾಗೂ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಅವರಿಗೆ ಹಸೆಮಣೆ ಏರುವ ಬಯಕೆ ಮೂಡಿದೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹೊಸ ಅಭಿಮಾನಿಗಳು ಸಿಕ್ಕರೆ ಎಲ್ಲರೂ ಮದುವೆ ಯಾವಾಗ ಎಂಬ ಪ್ರಶ್ನೆಯನ್ನೇ ಕೇಳುತ್ತಿದ್ದಾರೆ. ಹೀಗಾಗಿ ಇದೀಗ ತಾನೂ ಮದುವೆ ಆಗಬೇಕು ಎಂದು ಅನಿಸುತ್ತಿದೆ ಎಂದು ಹೇಳಿದ್ದಾರೆ.

ಸ್ನೇಹಿತರ ಮದುವೆ, ಪಾರ್ಟಿ, ಫಂಕ್ಷನ್‍ಗಳಿಗೆ ಹೋದರೆ ನನ್ನ ಎಲ್ಲಾ ಸ್ನೇಹಿತರು ತಮ್ಮ ಲೈಫ್ ಪಾರ್ಟ್ನರ್ ಜೊತೆ ಬರುತ್ತಿದ್ದಾರೆ. ನಾನು ಮಾತ್ರ ಸಿಂಗಲ್ ಆಗಿ ಹೋದಾಗ ನಾನು ಮದುವೆ ಆಗಬೇಕು ಎಂದು ಅನಿಸುತ್ತದೆ. ಹೀಗಾಗಿ ನಾನು ಅದಷ್ಟು ಬೇಗ ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ.

ಚಂದನ್ ಮದುವೆ ಆಗುವ ಹುಡುಗಿ ಯಾರು ಎನ್ನುವುದು ಇನ್ನೂ ಫೈನಲ್ ಆಗಿಲ್ಲ. ಏಕೆಂದರೆ ಅವರು ಮೊದಲು ಸ್ವಂತ ಮನೆ ಮಾಡಬೇಕು. ಅದು ಆದಷ್ಟು ಬೇಗ ಮಾಡುತ್ತೀನಿ. ಆದಾದ ಬಳಿಕವೇ ಮದುವೆ ಆಗುತ್ತೀನಿ ಎಂದು ಹೇಳಿದ್ದಾರೆ.

ಬಿಗ್‍ಬಾಸ್ ಮನೆಗೆ ಹೋಗಿ ಬಂದ ಮೇಲೆ ಚಂದನ್ ಲಕ್ ಬದಲಾಯಿತು. ಆಸ್ಟೇಲಿಯಾ, ಅಮೇರಿಕಾ ಸೇರಿದಂತೆ ಬೇರೆ ಬೇರೆ ದೇಶದಲ್ಲಿರುವ ಕನ್ನಡಿಗರು ಫೈಯರ್ ಸಾಂಗ್‍ಗೆ ಫಿದಾ ಆಗಿದ್ದಾರೆ. ಡ್ಯಾನ್ಸ್ ಮಾಡಿ ವಿಡಿಯೋಗಳನ್ನು ಕೂಡ ಕಳುಹಿಸುತ್ತಿದ್ದಾರೆ. ಈ ಎಲ್ಲದರ ನಡುವೆ ಇದೀಗ ಚಂದನ್‍ಗೆ ಮದುಮಗನಾಗುವ ಆಸೆ ಮನದಲ್ಲಿ ಚಿಗುರೊಡೆದಿದೆ.

For latest updates on film news subscribe our channel.

Subscribe on YouTube: www.youtube.com/publicmusictv
Like us @ https://www.facebook.com/publicmusictv
Follow us @ https://twitter.com/publicmusictv