Surprise Me!

ಇಂದಿನಿಂದ 3 ದಿನ ದರ್ಶನ್ ಸೆರೆ ಹಿಡಿದ ಫೋಟೋ ಪ್ರದರ್ಶನ

2021-07-06 3 Dailymotion

ಮಾರ್ಚ್ 3ರಂದು ವಿಶ್ವ ವನ್ಯಜೀವಿ ದಿನ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆರೆ ಹಿಡಿದ ಛಾಯಾಚಿತ್ರ ಪ್ರದರ್ಶನವಾಗುತ್ತಿದೆ.

ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‍ನಲ್ಲಿ ಮೂರು ದಿನಗಳ ಕಾಲ ಪ್ರದರ್ಶನ ನಡೆಯಲಿದ್ದು, ಇಂದು ನಟ ದರ್ಶನ್ ಹಾಗೂ ಸಂದೇಶ್ ನಾಗರಾಜು ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ಪ್ರದರ್ಶನದಲ್ಲಿ ದರ್ಶನ್ ಅವರು ಕಾಡಿನಲ್ಲಿ ಸೆರೆ ಹಿಡಿದ 75 ಆಯ್ದ ಛಾಯಾಚಿತ್ರಗಳನ್ನು ವನ್ಯಜೀವಿ ಸಂರಕ್ಷಣಾ ನಿಧಿಗೆ ಹಣ ಸಂಗ್ರಹಿಸಲು ಪ್ರದರ್ಶನಕ್ಕೆ ಇಡಲಾಗಿದೆ.

ತಮ್ಮ ಚಿತ್ರಗಳ ಪ್ರದರ್ಶನದ ಜೊತೆಗೆ ಮಾರಾಟದ ಆಯೋಜನೆ ಕೂಡ ನಡೆಯುತ್ತಿದೆ. ಪ್ರತಿ ಚಿತ್ರಕ್ಕೆ 2000 ಬೆಲೆ ನಿಗದಿ ಆಗಿದ್ದು, ಫೋಟೋ ಜೊತೆಗೆ ದರ್ಶನ್ ಆಟೋಗ್ರಾಫ್ ಪಡೆಯಲು 500 ಹೆಚ್ಚುವರಿ ಹಣ ನೀಡಬೇಕಾಗುತ್ತದೆ. ಮೂರು ದಿನಗಳು ಪ್ರದರ್ಶನದ ಜಾಗದಲ್ಲಿ ಇದ್ದು ದರ್ಶನ್ ಆಟೋಗ್ರಾಫ್ ನೀಡಲಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಈ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ಸ್ಥಳಕ್ಕೆ ನಟ ದರ್ಶನ್ ಆಗಮಿಸಿ ಫೋಟೋಗಳನ್ನು ವೀಕ್ಷಿಸುತ್ತಿದ್ದಾರೆ.
For latest updates on film news subscribe our channel.

Subscribe on YouTube: www.youtube.com/publicmusictv
Like us @ https://www.facebook.com/publicmusictv
Follow us @ https://twitter.com/publicmusictv

Buy Now on CodeCanyon