Surprise Me!

ಕನ್ನಡದ ಹಿರಿಯ ನಟ ಶಿವರಾಂ ಆರೋಗ್ಯ ಗಂಭೀರ ಎಂದ ವೈದ್ಯರು!

2021-12-04 3,915 Dailymotion

ನಟ, ನಿರ್ಮಾಪಕ, ನಿರ್ದೇಶಕ ಶಿವರಾಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕಳೆದ 5 ದಿನಗಳ ಹಿಂದೆ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಇಂದು ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಹೊಸಕೆರೆಹಳ್ಳಿಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಶಿವರಾಂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಶಿವರಾಂ ಆರೋಗ್ಯದ ಬಗ್ಗೆ ಮಾತನಾಡಿ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದೆ, ಕೆಲ ಅಂಗಾಂಗಳು ಕೆಲಸ ನಿಲ್ಲಿಸಿವೆ ಎಂದು ಹೇಳಿದ್ದಾರೆ. ಈಗಾಗಲೇ ನಟರಾದ ದೊಡ್ಡಣ್ಣ, ಗಿರಿಜಾ ಲೋಕೇಶ್, ಭಾರತಿ ವಿಷ್ಣುವರ್ಧನ್, ಡಾ ಶಿವರಾಜ್‌ಕುಮಾರ್, ಮಾಸ್ಟರ್ ಆನಂದ್, ಪ್ರೇಮ್ ಮುಂತಾದವರು ಶಿವರಾಂ ಆರೋಗ್ಯ ನೋಡಲು ಆಸ್ಪತ್ರೆಗೆ ಬಂದಿದ್ದರು. 1958ರಿಂದ ಶಿವರಾಂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಈಗಾಗಲೇ ಅವರ ನಿರ್ಮಾಣ ಸಂಸ್ಥೆಯ ಮೂಲಕ ಕೆಲ ಸಿನಿಮಾಗಳನ್ನು ಮಾಡಿದ್ದರು. ಕನ್ನಡ ಸಿನಿಮಾ ಸೇರಿದಂತೆ ಕಿರುತೆರೆಯಲ್ಲಿಯೂ ಶಿವರಾಂ ನಟಿಸಿದ್ದಾರೆ.

Buy Now on CodeCanyon