Surprise Me!

ಪೊಲೀಸರು ಗಾಡಿ ಕೀ ಕಿತ್ತುಕೊಳ್ಳುವುದರ ವಿರುದ್ಧ ಪ್ರತಿಭಟನೆ

2022-02-03 0 Dailymotion

ಪೊಲೀಸರು ಗಾಡಿ ಕೀ ಕಿತ್ತುಕೊಳ್ಳುವುದರ ವಿರುದ್ಧ ಪ್ರತಿಭಟನೆ

ಕೋಲಾರ: ಆರೋಗ್ಯದ ಸಮಸ್ಯೆಯಿಂದ ಮೆಡಿಕಲ್ ಶಾಪ್ ನಲ್ಲಿ ಔಷಧಿಗಳನ್ನು ಖರೀದಿಸಲು ಬಂದಿದ್ದ ನನ್ನನ್ನು ಆಸ್ಪತ್ರೆಗೆ ಹೋಗದಂತೆ ತಡೆದು ಬೈಕ್ ಹಿಂಬದಿಯಲ್ಲಿ ಕುಳಿತ ಕೋಲಾರ ನಗರ ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್ ಶ್ರೀನಿವಾಸ್. ವಿ.ಬಿ ಅನುಚಿತ ವರ್ತನೆಯಿಂದ ತೊಂದರೆ ಉಂಟು ಮಾಡಿದ್ದಾರೆ ಎಂದು ಎಸ್.ಎಫ್.ಐ. ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಆರೋಪಿಸಿದ್ದಾರೆ.

ಸಂಚಾರಿ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಿ ಅದು ಬಿಟ್ಟು.. ಏಕಾಏಕಿ ಗಾಡಿ ಕೀಲಿ ಕೈ ಕಿತ್ತುಕೊಂಡು ಆಸ್ಪತ್ರೆಗೆ ಹೋಗದಂತೆ ತಡೆದು ಹಿಂದೆ ಕುಳಿತುಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ಅಧಿಕಾರ ಇದಿಯಾ.? ಎಂದಿದ್ದಾರೆ.

ರಸೀದಿ ನೀಡದೆ ಅನಾಧಿಕೃತವಾಗಿ ಹಣ ವಸೂಲಿಯಿಂದ ಕೋಲಾರ ನಗರ ಟ್ರಾಫಿಕ್ ಪೊಲೀಸರ ಕಾನೂನು ಬಾಹಿರ ವರ್ತನೆಯಿಂದ ಸಾರ್ವಜನಿಕರ ಶೋಷಣೆ ನಡೆಯುತ್ತಿದೆ. ಬೊಮ್ಮಾಯಿ ಸಾಹೇಬರು ಗಮನಿಸಿ ನಿಮ್ಮ ಟ್ರಾಫಿಕ್ ಟೋಯಿಂಗ್ ರೂಲ್ಸ್ ಗಳನ್ನು ಕೋಲಾರ ಟ್ರಾಫಿಕ್ ಪೊಲೀಸರು ಹೇಗೆ ಜಾರಿಗೊಳಿಸುತ್ತಿದ್ದಾರೆ ನೋಡಿ..? ಎಂದಿದ್ದಾರೆ.

Buy Now on CodeCanyon