Surprise Me!

'ದೊಡ್ಮನೆ ಹುಡ್ಗ'ನ ಕಂಚಿನ ಪುತ್ಥಳಿ ಅನಾವರಣ..! Puneeth Rajkumar Statue

2022-06-05 191 Dailymotion

ಅಪ್ಪು ನಮ್ಮನ್ನ ಅಗಲಿ ತಿಂಗಳುಗಳೇ ಕಳೆದ್ರೂ ಅವ್ರ ನೆನಪು ಮಾತ್ರ ಇನ್ನೂ ಜನ್ರ ಮನಸ್ಸಿಂದ ಮಾಸಿಲ್ಲ. ಇದಕ್ಕೆ ಸಾಕ್ಷಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನೆರೆದಿದ್ದ ಜನಸ್ತೋಮ. ಇವತ್ತು ಹೊಸಪೇಟೆಯ ಪುನೀತ್ ರಾಜ್‍ಕುಮಾರ್ ಸರ್ಕಲ್‍ನಲ್ಲಿ ಪುನೀತ್ ರಾಜಕುಮಾರ್ ಅವ್ರ 7.04 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನ ಅನಾವರಣ ಮಾಡಲಾಯ್ತು. ನಟ ರಾಘವೇಂದ್ರ ರಾಜ್‍ಕುಮಾರ್ ತಮ್ಮನ ಪುತ್ಥಳಿಯನ್ನ ಅನಾವರಣ ಮಾಡಿದ್ರು. ಈ ವೇಳೆ ಸಚಿವ ಆನಂದ್ ಸಿಂಗ್, ನಟ ಅಜೇಯ್ ರಾವ್ ಸಾಥ್ ನೀಡಿದ್ರು.. ಅಪ್ಪು ನೆನೆದು ರಾಘಣ್ಣ ಹಾಗೂ ಪತ್ನಿ ಮಂಗಳಾ ಸೇರಿದಂತೆ ವೇದಿಕೆ ಮೇಲಿದ್ದ ಮಕ್ಕಳು ಸಹಾ ಕಣ್ಣೀರು ಹಾಕಿದ್ರು. ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನ ಸಾಗರವೇ ಹರಿದು ಬಂದಿತ್ತು.. <br /><br />#publictv #puneethrajkumarstatue #hosapete <br />

Buy Now on CodeCanyon