ಬೆಳಗಾವಿ : ಖಾನಾಪುರ ತಾಲೂಕಿನ ರೈತರ ನಿದ್ದೆಗೆಡಿಸಿದ್ದ ಆನೆಯನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕರಂಬಳ, ಚಾಪಗಾಂವ್ ಸೇರಿ ಹಲವೆಡೆ ಕಾಡಾನೆ ಹಾವಳಿಗೆ ರೈತರು ನಲುಗಿ ಹೋಗಿದ್ದರು. ಕಬ್ಬು ಮತ್ತಿತರ ಬೆಳೆಗಳನ್ನು ಆನೆ ಹಾಳು ಮಾಡುತ್ತಿದ್ದರಿಂದ ರೈತರು ಕಂಗಾಲಾಗಿದ್ದರು.

ಕಾಡಾನೆ ಹಾವಳಿಗೆ ಕಂಗೆಟ್ಟಿದ್ದ ಖಾನಾಪುರದ ರೈತರಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಶಿವಮೊಗ್ಗದ ಸಕ್ರೆಬೈಲು ಬಿಡಾರದಿಂದ ಬಂದಿದ್ದ ನುರಿತ ಆನೆಗಳ ಸಹಾಯದಿಂದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ.

ಇದನ್ನೂ ಓದಿ : ರಾಮನಗರದಲ್ಲಿ ಕ್ಯಾಪ್ಟನ್ ಮಹೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ: ಒಂದು ಕಾಡಾನೆ ಸೆರೆ - WILD ELEPHANT CAPTURE OPERATION

ಖಾನಾಪುರ ಎಸಿಎಫ್ ಸುನೀತಾ ನಿಂಬರಗಿ ನೇತೃತ್ವದಲ್ಲಿ ನಿನ್ನೆ (ಗುರುವಾರ) ಬೆಳಿಗ್ಗೆಯಿಂದ ಸಂಜೆಯವರೆಗೂ ಕಾಡಾನೆ ಸೆರೆ ಕಾರ್ಯಾಚರಣೆ ನಡೆದಿತ್ತು. ನುರಿತ ಆನೆಗಳ ಸಹಾಯದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಯನ್ನ ಹಿಡಿದಿದ್ದಾರೆ.

ಕಾರ್ಯಾಚರಣೆಯಲ್ಲಿ ಖಾನಾಪುರ ಆರ್ಎಫ್ಓ ಶ್ರೀಕಾಂತ್ ಪಾಟೀಲ, ನಂದಗಡ ವಲಯ ಅರಣ್ಯ ಅಧಿಕಾರಿ ಮಾಧುರಿ ದಳವಾಯಿ ಸೇರಿ ಸಿಬ್ಬಂದಿ ಭಾಗಿಯಾಗಿದ್ದರು.

ಇದನ್ನೂ ಓದಿ : ಚನ್ನಪಟ್ಟಣ ತಾಲೂಕಿನಲ್ಲಿ ಎರಡನೇ ಕಾಡಾನೆ ಸೆರೆ ; ಹೀಗಿತ್ತು ಕಾರ್ಯಾಚರಣೆ - WILD ELEPHANT CAPTURED