Surprise Me!

ಮೈಸೂರು: ಕಟಾವು ಮಾಡಿ ರಾಶಿ ಹಾಕಿದ್ದ ಬೆಳೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

2025-05-11 4 Dailymotion

ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ಹಳೇಹೆಗ್ಗುಡಿಲು ಗ್ರಾಮದಲ್ಲಿ ಸಾಲ ಮಾಡಿ ಬೆಳೆದಿದ್ದ ರೈತನ ಬೆಳೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಶನಿವಾರ ಸಂಜೆ 7:30ರ ಸುಮಾರಿಗೆ ಘಟನೆ ನಡೆದಿದ್ದು, ರೈತ ನಿಂಗರಾಜು ಕಂಗಾಲಾಗಿದ್ದಾರೆ.

ಕಟಾವು ಮಾಡಿ ಒಂದು ಕಡೆ ರಾಶಿ ಹಾಕಿದ್ದ ಬೆಳೆಗೆ ಬೆಂಕಿ ಹಚ್ಚಲಾಗಿದೆ. ಸುಮಾರು ಇಪ್ಪತ್ತು ಪೈಪ್‌ಗಳು ಹಾಗೂ ಬೆಳೆ ಮುಚ್ಚಿದ್ದ ಸುಮಾರು ಇಪ್ಪತ್ತು ಸಾವಿರ ರೂ ಬೆಲೆಯ ಟಾರ್ಪಲ್ ಕೂಡಾ ಸುಟ್ಟು ಹೋಗಿದೆ.

"ಸುಮಾರು ಒಂದು ಲಕ್ಷ ರೂಪಾಯಿ ಖರ್ಚು ಮಾಡಿ ಎರಡೆಕರೆಯಲ್ಲಿ ಬೆಳೆ ಬೆಳೆದಿದ್ದೆ. ಸಾಲ ತೀರಿಸಬಹುದು ಎಂದು ಸಂತೋಷದಲ್ಲಿದ್ದೆ. ಆದರೆ ಕಿಡಿಗೇಡಿಗಳು ಯಾರೋ ಬೆಂಕಿ ಹಾಕಿ ಎಲ್ಲವನ್ನೂ ನಾಶ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ನಮಗೆ ಪರಿಹಾರ ನೀಡಿದರೆ ಸ್ವಲ್ಪ ಸಹಾಯ ಆಗುತ್ತದೆ. ಅಲ್ಲದೆ ಪೊಲೀಸರು ಈ ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸಬೇಕು" ಎಂದು ರೈತ ನಿಂಗರಾಜು ಒತ್ತಾಯಿಸಿದರು.

ಇದನ್ನೂ ಓದಿ : ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ ಮೌಲ್ಯದ ಬೆಳೆಗಳು ಹಾನಿ: ವಿಡಿಯೋ - CROP BURN

Buy Now on CodeCanyon