<p>ಈ ಹಿಂದೆ ಸೋನು ನಿಗಮ್ ಕನ್ನಡ ಭಾಷೆಗೆ ಅವಮಾನ ಮಾಡಿದ್ರು. ದೊಡ್ಡ ಮಟ್ಟದಲ್ಲಿ ಕನ್ನಡ ಸಂಘಟನೆಗಳು ಪ್ರತಿಭಟನೆ ಮಾಡಿದ್ವು. ಈಗ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಅಂತ ವಿವಾದಿತ ಹೇಳಿಕೆ ಕೊಟ್ಟಿದ್ದಾರೆ.. ಈಗಲೂ ಕನ್ನಡ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆ ಮಾಡ್ತಾ ಇವೆ. ಆದ್ರೆ ಇಷ್ಟೆಲ್ಲಾ ಅದ್ರೂ ಕನ್ನಡದ ಒಬ್ಬೇ ಒಬ್ಬ ಬಿಗ್ ಸ್ಟಾರ್ ಈ ಬಗ್ಗೆ ಮಾತನಾಡಿಲ್ಲ. ಹಾಗಾದ್ರೆ ಈ ನಟರ ಕನ್ನಡ ಪ್ರೇಮ ತೆರೆ ಮೇಲೆ ಮಾತ್ರನಾ ಅನ್ನೋ ಪ್ರಶ್ನೆ ಕೇಳ್ತಿದ್ದಾರೆ ಜನ..<br> </p>