<p>ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್ ನಂತರ ಶಿವರಾಜ್ಕುಮಾರ್ ಕನ್ನಡ ಚಿತ್ರರಂಗದ ನಾಯಕತ್ವ ವಹಿಸಬೇಕು ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ಆದ್ರೆ ಅದ್ಯಾಕೋ ಶಿವಣ್ಣ ನಾಯಕತ್ವದ ಹೊಣೆ ಹೊರಲಿಲ್ಲ. ಆದ್ರೂ ಅಭಿಮಾನಿಗಳ ಮನಸಲ್ಲಿ ಅವರೇ ಕರುನಾಡ ಚಕ್ರವರ್ತಿ. ಆದ್ರೆ ಈಗ ಚಕ್ರವರ್ತಿಯ ಎದುರೇ ಕನ್ನಡಕ್ಕೆ ಅವಮಾನ ಆಗಿದೆ. ಶಿವಣ್ಣ ಯಾಕೆ ಸುಮ್ಮನಿದ್ದಾರೆ ಅಂತ ಅಭಿಮಾನಿಗಳು ಪ್ರಶ್ನೆ ಮಾಡ್ತಾ ಇದ್ದಾರೆ.</p>
