<p>ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಸಿನಿ ಬದುಕಿಗೆ 40 ವರ್ಷಗಳು ತುಂಬಿವೆ. 4 ದಶಕ, 130 ಸಿನಿಮಾ.. ಈಗಲೂ ಕೈ ತುಂಬಾ ಚಿತ್ರಗಳು.. ಇದು ಕಡಿಮೆ ಸಾಧನೆ ಏನಲ್ಲ. ಬಹುಶಃ ಮುಂದಿನ ತಲೆಮಾರಿನ ತಾರೆಯರು ಇಂಥದ್ದೊಂದು ಸಾಧನೆ ಮಾಡೋದು ಸಾಧ್ಯವಾ ಗೊತ್ತಿಲ್ಲ. ಅಂತೆಯೇ ಇಂಥದ್ದೊಂದು ಮೈಲಿಗಲ್ಲು ಮುಟ್ಟಿರುವ ಶಿವಣ್ಣನನ್ನ ಎಲ್ಲರೂ ಅಭಿನಂದಿಸ್ತಾ ಇದ್ದಾರೆ. ಅದ್ರಲ್ಲೂ ವಿಶೇಷವಾಗಿ ಕಾಲಿವುಡ್, ಟಾಲಿವುಡ್ನ ದಿಗ್ಗಜರೆಲ್ಲಾ ಶಿವಣ್ಣನಿಗೆ ಅಭಿನಂದನೆ ಸಲ್ಲಿಸಿದ್ದಾರೆ.</p>