Surprise Me!

ದಾವಣಗೆರೆ: ಸಿಎಂ, ಡಿಸಿಎಂ ಮನೆಗೆ ಮುತ್ತಿಗೆ ಹಾಕಲು ಹೊರಟ ರೈತರನ್ನು ತಡೆದ ಪೊಲೀಸರು

2025-07-14 22 Dailymotion

ದಾವಣಗೆರೆ: ಭದ್ರಾ ಬಲದಂಡೆ ಕಾಲುವೆ ಸೀಳಿ ಕಾಮಗಾರಿ ಕೈಗೊಂಡಿರುವ ಸರ್ಕಾರದ ನಡೆಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿ ನಿಲ್ಲಸಬೇಕೆಂದು ನಿರಂತರ ಹೋರಾಟ ಮಾಡ್ತಿದ್ದಾರೆ. ಆದ್ರೆ ಸರ್ಕಾರ ಕಾಮಗಾರಿ ನಿಲ್ಲಿಸುವಂತೆ ಕಾಣುತ್ತಿಲ್ಲ. ಹೀಗಾಗಿ ಇಂದು ರೈತರು ಬೆಂಗಳೂರಿಗೆ ತೆರಳಿ ಸಿಎಂ, ಡಿಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಆದರೆ, ರೈತರು ಬೆಂಗಳೂರು ತಲುಪುವ ಮುನ್ನವೇ ಪೊಲೀಸರು ಅವರನ್ನು ತಡೆದರು.‌

ದಾವಣಗೆರೆಯಿಂದ ಹೊರಟಿದ್ದ ರೈತರನ್ನು ತುಮಕೂರು ಟೋಲ್ ಬಳಿ ತಡೆದ ಪೊಲೀಸರು ವಾಪಸ್ ತೆರಳುವಂತೆ ಸೂಚಿಸಿದ್ದಾರೆ.

ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿಗೆ ವಿರೋಧ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂ ಮನೆಗೆ ಮುತ್ತಿಗೆ ಹಾಕಲು ಭಾರತೀಯ ರೈತ ಒಕ್ಕೂಟ ನಿರ್ಧರಿಸಿತ್ತು.‌ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಂಡಿದ್ದರು. ರೇಣುಕಾಚಾರ್ಯರ ಬೆಂಗಳೂರು ನಿವಾಸದಲ್ಲಿ ಪೊಲೀಸ್ ಸರ್ಪಗಾವಲು ಹಾಕಿದ್ದು, ಹೋರಾಟ ಹತ್ತಿಕ್ಕುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಹೊಸದುರ್ಗ, ತರೀಕೆರೆ, ಕಡೂರು,‌ ಅಜ್ಜಂಪುರ ತಾಲೂಕುಗಳಿಗೆ ಸಂಬಂಧಿಸಿದಂತೆ ಒಟ್ಟು 1,200 ಹಳ್ಳಿಗಳಿಗೆ ಕುಡಿಯುವ ನೀರು ಒಯ್ಯುವ ಯೋಜನೆ ಇದಾಗಿದೆ.‌ ಭದ್ರಾ ಬಲದಂಡೆ ಕಾಲುವೆಯಿಂದ ನೀರು ಬೇರೆ ತಾಲೂಕುಗಳಿಗೆ ಒಯ್ಯುವುದಾದ್ರೆ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ನೀರು ತಲುಪುವುದಿಲ್ಲ ಎಂದು ಒಂದು ಹೆಜ್ಜೆ ಮುಂದೆ ಹೋಗಿ ರೈತರು ಹೋರಾಟ ಹಮ್ಮಿಕೊಂಡಿದ್ದರು.

ಇದನ್ನೂ ಓದಿ: ಅಚ್ಚುಕಟ್ಟು ಪ್ರದೇಶದ ರೈತರ ಕೆಂಗಣ್ಣಿಗೆ ಗುರಿಯಾದ ಭದ್ರಾ ಬಲದಂಡೆ ನಾಲೆಯ ಕಾಮಗಾರಿ - FARMERS PROTEST

Buy Now on CodeCanyon