ಮೈಸೂರು: ಗಾಳಿಪಟದ ದಾರಕ್ಕೆ ಸಿಲುಕಿ ಒದ್ದಾಡುತ್ತಿದ್ದ, ಹದ್ದನ್ನು ರಕ್ಷಣೆ ಮಾಡಿರುವ ಘಟನೆ ಮೈಸೂರು ನಗರದಲ್ಲಿ ನಡೆದಿದೆ. ನಗರದ ಮಂಡಿಮೊಹಲ್ಲಾದ ನಿವಾಸಿ ಸೂರಜ್ ಎಂಬುವವರ ಮನೆಯ ಕಾಂಪೌಂಡ್ನಲ್ಲಿ ಗಾಳಿಪಟದ ದಾರಕ್ಕೆ ಹದ್ದು ಸಿಲುಕಿ, ಒದ್ದಾಡುತ್ತಿತ್ತು. ರೆಕ್ಕೆ, ಮೈಗೆ ಗಾಳಿಪಟದ ದಾರ ಸಿಲುಕಿಕೊಂಡು ನರಳಾಡುತ್ತಿದ್ದ ಹದ್ದನ್ನು ಜೋಪಾನವಾಗಿ ಸೂರಜ್ ರಕ್ಷಣೆ ಮಾಡಿದ್ದಾರೆ.

ಬಳಿಕ ಈ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಕಳಕಳಿಯಿಂದ ಸಾರ್ವಜನಿಕರಿಗೊಂದು ಸಂದೇಶ ನೀಡಿದ್ದಾರೆ.

"ಪ್ರಿಯ ಬಂಧುಗಳೇ, ಈ ಆಷಾಢ ಮಾಸದ ಗಾಳಿ ಪಟದ ಹಬ್ಬ ಏನಿದೆ, ಈ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿ ನಾನು ಕೇಳಿಕೊಳ್ಳುತ್ತಿದ್ದೇನೆ. ಏಕೆಂದರೆ ಈ ಗಾಳಿಪಟ ಆಚರಣೆಯಲ್ಲಿ, ಗಾಳಿ ಪಟ ಹಾರಿಸಿ ಅದರ ಹಗ್ಗವನ್ನು ಹಾಗೇ ಬಿಟ್ಟಿರುತ್ತಾರೆ. ಅದು ಗಾಳಿಯಲ್ಲೇ ಇರುತ್ತದೆ. ಇದು ಹಾರುವ ಹಕ್ಕಿಗಳಿಗೆ, ಪ್ರಾಣಿ ಪಕ್ಷಿಗಳಿಗೆ ಕಂಠಕವಾಗುತ್ತದೆ. ಇದಕ್ಕೆ ಉದಾಹಣೆ ಇಂದು ನಮ್ಮ ಮನೆಯಲ್ಲಿ ಒಂದು ಹದ್ದು ಗಾಳಿಪಟದ ದಾರಕ್ಕೆ ಸಿಕ್ಕಿಹಾಕಿಕೊಂಡಿದ್ದು, ರಕ್ಷಣೆ ಮಾಡಲಾಗಿದೆ. ಸೂಕ್ಷ್ಮ ಕಣ್ಣು ಹದ್ದಿನದ್ದು, ಹದ್ದಿನ ಕಣ್ಣು ಎಂದು ನಾವು ಕರೆಯುತ್ತೇವೆ. ಆದರೆ, ಅದರ ಕಣ್ಣಿಗೆ ದಾರ ಕಾಣಲಿಲ್ಲ ಎಂದರೆ ಇನ್ನು ಬೇರೆ ಪ್ರಾಣಿ ಪಕ್ಷಿಗಳ ಗತಿಯೇನು?. ಹಾಗಾಗಿ ಗಾಳಿಪಟ ಹಾರಿಸಿದ ನಂತರ ಆ ದಾರವನ್ನು ಸುತ್ತಿ ಇಟ್ಟು, ಪರಿಸರ ಮಾಲಿನ್ಯ ಮಾಡದಿರಲು ನಿಮ್ಮಲ್ಲಿ ವಿನಂತಿ" ಎಂದಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಾಣಿ - ಪಕ್ಷಿಗಳ ಕಾಟ: ರನ್ ವೇ ಸುತ್ತಮುತ್ತ ಹಕ್ಕಿಗಳ ನಿಯಂತ್ರಣಕ್ಕೆ ಚಿಂತನೆ