Surprise Me!

ಗದ್ದೆಯಲ್ಲಿದ್ದ ಬೃಹತ್ ಗಾತ್ರದ ಕಾಳಿಂಗಸರ್ಪ ರಕ್ಷಣೆ: ವಿಡಿಯೋ

2025-07-24 28 Dailymotion

ಮೈಸೂರು/ಮಡಿಕೇರಿ: ಗದ್ದೆಯಲ್ಲಿದ್ದ ಸುಮಾರು 10 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗತಜ್ಞ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ನಾಪೋಕ್ಲು ಬಳಿಯ ನೆಲಜಿ ಗ್ರಾಮದ ಗದ್ದೆಯಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪವನ್ನು ಮೂರ್ನಾಡಿನ ಉರಗತಜ್ಞ ಸ್ನೇಕ್ ಪ್ರಜ್ವಲ್ ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು.

ಬಲ್ಲಮಾವಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆಲಜಿ ಗ್ರಾಮದ ನಿವಾಸಿ ಅಪ್ಪುಮಣಿಯಂಡ ರಘು ಸುಬ್ಬಯ್ಯ ಎಂಬವರ ಗದ್ದೆಯಲ್ಲಿ 10 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಂಡುಬಂದಿದೆ. ಸರ್ಪವನ್ನು ಕಂಡು ಭಯಭೀತರಾದ ಮನೆಮಂದಿ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಮೂರ್ನಾಡಿನ ಉರಗತಜ್ಞ ಸ್ನೇಕ್ ಪ್ರಜ್ವಲ್ ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪವನ್ನು ಸೆರೆಹಿಡಿದು ರಕ್ಷಣೆ ಮಾಡಿದ್ದಾರೆ.

ಬಳಿಕ ಸುರಕ್ಷಿತವಾಗಿ ಮಾಕುಟ್ಟ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಭಾಗಮಂಡಲ ಉಪವಲಯ ಅರಣ್ಯ ಇಲಾಖೆ ಅಧಿಕಾರಿ ಕಾಳೇಗೌಡ ಹಾಗೂ ಸಿಬ್ಬಂದಿ ಹಾಜರಿದ್ದರು.

ಇದನ್ನೂ ನೋಡಿ: Watch Video.. ವೃತ್ತಿಯಲ್ಲಿ ಹೋಮ್​​ಗಾರ್ಡ್​ ಪ್ರವೃತ್ತಿಯಲ್ಲಿ ಉರಗ ರಕ್ಷಕ: 6 ಸಾವಿರ ಹಾವುಗಳನ್ನ ಕಾಪಾಡುವುದರ ಜತೆಗೆ ಮಹತ್ವದ ಪಾಠ: ಯಾರೀ ಉರಗಪ್ರೇಮಿ?

Buy Now on CodeCanyon