ರಾಯಚೂರು: ಕಲಿಯುಗ ಕಾಮಧೇನು, ಭಕ್ತರ ಕಲ್ಪವೃಕ್ಷ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಸಪ್ತರಾತ್ರೋತ್ಸವದ ಎರಡನೇ ದಿನದಂದು, ಶ್ರೀ ಪ್ರಹ್ಲಾದ ರಾಜರ ಪಲ್ಲಕ್ಕಿ ಉತ್ಸವವ ಶ್ರೀ ಮಠದಿಂದ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ಭವ್ಯ ಮೆರವಣಿಗೆ ಜರುಗಿತು.

ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಈ ಮಹೋತ್ಸವ ನಡೆಯುತ್ತಿದೆ. ಶ್ರೀ ಸ್ವಾಮೀಜಿ ಪರಿಮಳ ತೀರ್ಥದಲ್ಲಿ ಶ್ರೀ ಪ್ರಹ್ಲಾದ ರಾಜರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪುಷ್ಕರಣಿಯಲ್ಲಿ ಭವ್ಯವಾದ ತೆಪ್ಪೋತ್ಸವ ನೆರವೇರಿತು. ಇದನ್ನು ಎಲ್ಲಾ ಭಕ್ತರು ಕಣ್ತುಂಬಿಕೊಳ್ಳವ ಮೂಲಕ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಉಂಜಲ ಮಂಟಪದಲ್ಲಿ ಶಾಕೋತ್ಸವ: ಆರಾಧನಾ ಮಹೋತ್ಸವ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು, ವಾತಾವರಣ ಭಕ್ತಿ ಮತ್ತು ಸಂತೋಷದಿಂದ ತುಂಬಿತ್ತು. ಕಾರ್ಯಕ್ರಮದ ಸಮಯದಲ್ಲಿ, ಜಗದೀಶ್ ಪುತ್ತೂರು ಮತ್ತು ತಂಡದಿಂದ ಭಾವಪೂರ್ಣ ದಾಸವಾಣಿಯು ಆಧ್ಯಾತ್ಮಿಕ ವಾತಾವರಣದ ಮೆರಗನ್ನು ಮತ್ತಷ್ಟು ಹೆಚ್ಚಿಸಿತು. ಮಠಕ್ಕೆ ಹಿಂತಿರುಗಿದ ನಂತರ, ಉಂಜಲ ಮಂಟಪದಲ್ಲಿ ಶಾಕೋತ್ಸವವನ್ನು ನಡೆಸಲಾಯಿತು. ಹಾಗೇ ಬಳಿಕ ರಥೋತ್ಸವವನ್ನು ನಡೆಸಲಾಯಿತು. ಜೊತೆಗೆ ವಿಶೇಷವಾದ ಪೂಜಾ-ಕೈಂಕರ್ಯಗಳು ಸಹ ನಡೆಯುತ್ತಿವೆ.

ಇದನ್ನೂ ಓದಿ :ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ