<p>1946.. ಅದು ಭಾರತ ಇನ್ನೂ ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ಕಾಲ.. ಆಗಲೇ ಬ್ರಿಟಿಷ್ ಸರ್ಕಾರ, ಒಂದು ನಿರ್ಧಾರ ಕೈಗೊಂಡಿತ್ತು.. ಅದು ಜಾರಿಗೆ ಬಂದಿದ್ದು 1947ರ ಆಗಸ್ಟ್ 15ಕ್ಕೆ.. ಆ ದಿನ ಮಧ್ಯ ರಾತ್ರಿ ಭಾರತದ ಹೃದಯಕ್ಕೆ ಅಮೃತ ಸಿಂಚನವಾಗಿತ್ತು.. ನೂರಾರು ವರ್ಷಗಳ ಗುಲಾಮಗಿರಿಯ ಸರಪಳಿ ಕಳಚುವ ಆ ಕ್ಷಣಕ್ಕಾಗಿ ದೇಶವೇ ಕಾದಿತ್ತು.. ಸಂಸತ್ತಿನಲ್ಲಿ ಪಂಡಿತ್ ಜವಹರಲಾಲ್ ನೆಹರೂ ಅವರಾಡಿದ್ದ ಮಾತು, ಇಡೀ ದೇಶಕ್ಕೆ ಮರುಜನ್ಮ ನೀಡಿತ್ತು.. ಅವರ ಪ್ರತಿ ಮಾತೂ ಕೂಡ, ಅದ್ಭುತವೊಂದರ ಅನಾವರಣ ಮಾಡಿತ್ತು.. </p>
