Surprise Me!

ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ; ಮಧ್ಯರಾತ್ರಿ ಜಮಾಯಿಸಿದ ಸಾವಿರಾರು ಭಕ್ತರು

2025-08-16 15 Dailymotion

ಶಿರಡಿ (ಮಹಾರಾಷ್ಟ್ರ) : ಇಂದು ದೇಶಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಶಿರಡಿಯಲ್ಲಿಯೂ ಸಹ ಸಾಯಿಬಾಬಾ ಸಂಸ್ಥಾನದ ಪರವಾಗಿ ಸಾಯಿ ದೇವಾಲಯದಲ್ಲಿ ಈ ಹಬ್ಬವನ್ನು ಅತ್ಯಂತ ಶ್ರದ್ಧಾಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತಿದೆ.

ಸಾಯಿಬಾಬಾ ಅವರ ಸಮಾಧಿ ದೇವಾಲಯದಲ್ಲಿ ಬೆಳ್ಳಿಯ ತೊಟ್ಟಿಲಿನಲ್ಲಿ ಶ್ರೀ ಕೃಷ್ಣನ ಬೆಳ್ಳಿಯ ವಿಗ್ರಹವನ್ನು ಇರಿಸಿ ಬಾಲಕೃಷ್ಣನನ್ನು ಸ್ತುತಿಸಲಾಯಿತು. ಸಾಯಿ ಸಮಾಧಿ ದೇವಾಲಯದ ಮುಂಭಾಗದ ವೇದಿಕೆಯಲ್ಲಿ ಹೆಚ್​​ಬಿಪಿ ಶ್ರೀಮತಿ ಸ್ಮಿತಾ ಅಜೆಗಾಂವ್ಕರ್ ಶುಕ್ರವಾರ ರಾತ್ರಿ 10 ರಿಂದ 12ರ ವರೆಗೆ ಕೀರ್ತನೆಗಳನ್ನು ಹಾಡಿದರು.

ಮಧ್ಯರಾತ್ರಿ ಹನ್ನೆರಡು ಗಂಟೆಗೆ, ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋರಕ್ಷ ಗಾಡಿಲ್ಕರ್ ಅವರು ತಮ್ಮ ಪತ್ನಿಯೊಂದಿಗೆ ಶ್ರೀ ಕೃಷ್ಣನ ವಿಗ್ರಹದ ತೊಟ್ಟಿಲನ್ನು ತೂಗಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಶಿರಡಿ ಗ್ರಾಮಸ್ಥರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಸಾಯಿ ಭಕ್ತರು ಉಪಸ್ಥಿತರಿದ್ದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಮುಗಿದ ನಂತರ, ಸಾಯಿಬಾಬಾ ಅವರ ಶೇಜಾರತಿ ರಾತ್ರಿ 12.30 ಕ್ಕೆ ಪ್ರಾರಂಭವಾಯಿತು.

ಸಬ್ಕಾ ಮಲಿಕ್ ಏಕ ಎಂಬ ಮಹಾಮಂತ್ರವನ್ನು ನೀಡಿದ ಶಿರಡಿ ಸಾಯಿಬಾಬಾ ತಮ್ಮ ಜೀವಿತಾವಧಿಯಲ್ಲಿ ಅನೇಕ ಲೀಲೆಗಳನ್ನು ಪ್ರದರ್ಶಿಸಿದ್ದಾರೆ. ಸಾಯಿಬಾಬಾ ಕೃಷ್ಣನ ರೂಪದಲ್ಲಿ ಭಕ್ತನಿಗೆ ಕಾಣಿಸಿಕೊಂಡರು ಎಂದು ಹೇಳಲಾಗುತ್ತದೆ. ಆದ್ದರಿಂದ, ದೇಶಾದ್ಯಂತ ಸಾವಿರಾರು ಭಕ್ತರು ಶಿರಡಿಯ ಸಾಯಿಬಾಬಾರವರ ಸನ್ನಿಧಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲು ಬರುತ್ತಾರೆ.

ಇದನ್ನೂ ಓದಿ : ಈ ಬಾರಿ ಉಡುಪಿ ಕೃಷ್ಣನಿಗೆ 48 ದಿನಗಳ ಜನ್ಮಾಷ್ಟಮಿ ಸಡಗರ - SRI KRISHNA JANMASHTAMI

Buy Now on CodeCanyon