Surprise Me!

ತುಮಕೂರು : ಪುಟ್ಟ ಮಕ್ಕಳಿಗೆ ಕೃಷ್ಣ-ರಾಧೆಯ ವೇಷಗಳನ್ನು ತೊಡಿಸಿ ಜನ್ಮಾಷ್ಟಮಿ ಸಂಭ್ರಮಾಚರಣೆ

2025-08-16 52 Dailymotion

ತುಮಕೂರು : ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ನಗರದ ವಿವಿಧೆಡೆ ಪುಟ್ಟ ಮಕ್ಕಳಿಗೆ ಕೃಷ್ಣ ಹಾಗೂ ರಾಧೆಯ ವೇಷಗಳನ್ನು ತೊಡಿಸಿರುವ ಪೋಷಕರು ಶಾಲೆಗಳಲ್ಲಿ ಜನ್ಮಾಷ್ಟಮಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಪುಟ್ಟ ಮಕ್ಕಳಿಗೆ ಶ್ರೀ ಕೃಷ್ಣನ ವೇಷ ಧರಿಸಿ ಪೋಷಕರು ಕರೆದುಕೊಂಡು ಬಂದು ಶಾಲೆಗಳಿಗೆ ಬಿಡುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ.

ಜಿಲ್ಲೆಯ ಇಸ್ಕಾನ್ ವತಿಯಿಂದ ವಿಶೇಷವಾದ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶ್ರೀ ಕೃಷ್ಣ ರುಕ್ಮಿಣಿಯರ ಮೂರ್ತಿಗಳಿಗೆ ಸುಂದರವಾಗಿ ಅಲಂಕಾರ ಮಾಡುವ ಮೂಲಕ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಕೃಷ್ಣ ಹಾಗೂ ರುಕ್ಮಿಣಿಯ ಮೂರ್ತಿಗಳನ್ನು ತೊಟ್ಟಿಲಿನಲ್ಲಿ ಇರಿಸಿ ಭಕ್ತರಿಗೆ ತೂಗುವಂತಹ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಭಕ್ತರು ಕೂಡ ಶ್ರೀ ಕೃಷ್ಣನನ್ನು ಉಯ್ಯಾಲೆಯಲ್ಲಿ ತೂಗುವ ಮೂಲಕ ಭಕ್ತಿ ಸಮರ್ಪಣೆ ಮಾಡುತ್ತಿದ್ದಾರೆ.

ಈ ಕುರಿತು ಇಸ್ಕಾನ್ ಟೆಂಪಲ್​​ನ ಕೋ ಆರ್ಡಿನೇಟರ್ ಚೈತನ್ಯ ಪ್ರಸಾದ್ ದಾಸ್ ಅವರು ಮಾತನಾಡಿ, '5,000 ವರ್ಷಗಳ ಹಿಂದೆಯಾದ ಘಟನೆಯನ್ನು ನೆನಸಿಕೊಂಡು ಇಲ್ಲಿ ಅನೇಕ ಸಮಾರಂಭಗಳನ್ನು ಆಯೋಜಿಸಿದ್ದೇವೆ. ಬೆಳಗ್ಗೆ 5 ಗಂಟೆಯಿಂದಲೂ ಭಕ್ತಾದಿಗಳು ಇಲ್ಲಿಗೆ ಬರುತ್ತಾ, ಭಗವಂತನ ನಾಮ ಸಂಕೀರ್ತನೆ, ಪ್ರವಚನ, ದರ್ಶನ, ಪ್ರಸಾದದಲ್ಲಿ ತೊಡಗಿಕೊಂಡಿದ್ದಾರೆ. ಶಾಲಾ ಮಕ್ಕಳಿಗೆ ಚಿತ್ರಕಲಾ ಶಿಬಿರ, ಶ್ಲೋಕ ಹೇಳುವ ಕಾಂಪಿಟೇಶನ್, ಶ್ರೀ ಕೃಷ್ಣ ವೇಷದಾರಿಗಳ ಸ್ಪರ್ಧೆ, ಭಗವದ್ಗೀತೆ ಪಠಿಸುವ ಸ್ಪರ್ಧೆ ನಡೆಯುತ್ತಿದೆ. ಸಂಜೆ ನಾಮ ಸಂಕೀರ್ತನೆ, ಅಭಿಷೇಕ, ಭಜನೆ ಆಯೋಜಿಸಲಾಗಿದೆ. ದಿನವಿಡೀ ಪ್ರಸಾದ ವಿತರಣೆಯನ್ನು ಮಾಡಲಾಗುತ್ತಿದೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ :  ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ; ಮಧ್ಯರಾತ್ರಿ ಜಮಾಯಿಸಿದ ಸಾವಿರಾರು ಭಕ್ತರು - JANMASHTAMI 2025

Buy Now on CodeCanyon