Surprise Me!

ಚಿಕ್ಕಮಗಳೂರು: ಬೋನಿಗೆ ಬಿದ್ದ ಚಿರತೆ; ಜನರ ನಿಟ್ಟುಸಿರು

2025-08-17 34 Dailymotion

ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ತಿಮ್ಮಣ್ಣ ಎಂಬವರ ಮನೆ ಸಮೀಪ ಸುಳಿದಾಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ. ಇದರಿಂದಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಪದೇ ಪದೇ ಗ್ರಾಮದಲ್ಲಿ ಕಾಣಿಸಿಕೊಂಡಿದ್ದರಿಂದ ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಎರಡು-ಮೂರು ದಿನಗಳಿಂದ ಚಿರತೆ ಪ್ರತ್ಯಕ್ಷವಾಗುತ್ತಿದ್ದ ಜಾಗದಲ್ಲೇ ಬೋನಿರಿಸಿದ್ದರಿಂದ ಕಳೆದ ರಾತ್ರಿ ಚಿರತೆ ಸೆರೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸ್ಥಳೀಯ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ಶಿರಸಿಯಲ್ಲಿ ಮತ್ತೆ ಚಿರತೆ ಕಾಟ (ಪ್ರತ್ಯೇಕ ಸುದ್ದಿ) : ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮತ್ತೆ ಚಿರತೆ ಕಾಟ ಪ್ರಾರಂಭವಾಗಿದೆ. ಶಿರಸಿ ತಾಲೂಕಿನ ಶಿರಗಣಿ ಗ್ರಾಮದ ಸಾತ್ವಿಕ್ ಭಟ್ ಎಂಬವರ ಮನೆಗೆ ಆಗಸ್ಟ್​ 14 ರಂದು ರಾತ್ರಿ ಚಿರತೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು.

ಇದನ್ನೂ ಓದಿ :  Watch video..ಶಿರಸಿಯಲ್ಲಿ ಮತ್ತೆ ಚಿರತೆ ಕಾಟ: ಶಿರಗುಣಿಯಲ್ಲಿ ಮನೆ ಬಾಗಿಲಿಗೆ ಬಂದ ಚಿರತೆ - LEOPARD SPOTTED

Buy Now on CodeCanyon