ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಹಿಂಬದಿಯಲ್ಲಿ ಬರೋಬ್ಬರಿ 7 ಅಡಿ ಉದ್ದ ಹೆಬ್ಬಾವನ್ನು ಕಾಣಿಸಿಕೊಂಡಿದ್ದು, ಸ್ನೇಕ್ ಕಿರಣ್ ಕಷ್ಟಪಟ್ಟು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ಶ್ವೇತ ಬಂಡಿ ಅವರ ಮನೆ ಮುಂದೆ ನಿಲ್ಲಿಸಿದ್ದ ಮಹೇಂದ್ರ ಕಾರಿನ ಹಿಂಭಾಗದ ಬಂಪರ್ನಲ್ಲಿ ಹೆಬ್ಬಾವು ಸೇರಿಕೊಂಡಿದೆ. ಮೊದಲು ಹೆಬ್ಬಾವು ಮನೆ ಮುಂದೆ ಬಂದಿದ್ದ ಹಾವನ್ನು ಮನೆಯವರು ನೋಡುತ್ತಿದ್ದಂತಯೇ ಕಾರಿನ ಹಿಂಭಾಗದ ಬಂಪರ್ ನಲ್ಲಿ ಸೇರಿಕೊಂಡಿದೆ.

ಇದು ಹೊರಗೆ ಬರುತ್ತದೆ ಎಂದು ಸ್ವಲ್ಪ ಹೊತ್ತು ಕಾದು ಅದು ಅಲ್ಲಿಯೇ ಇರುವುದನ್ನು ಕಂಡು ಮನೆಯವರು ತಕ್ಷಣ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದಾರೆ. ವಿವೇಕಾನಂದ ಬಡಾವಣೆಗೆ ಬಂದ ಸ್ನೇಕ್ ಕಿರಣ್ ಮೊದಲು ಹೆಬ್ಬಾವು ಕಾರಿನಲ್ಲಿ ಹೇಗೆ ಒಳ ನುಗ್ಗಿದೆ ಎಂಬುದನ್ನು ನೋಡಿ, ಅದನ್ನು ಹೊರಗೆ ತೆಗೆಯುವ ಕುರಿತು ಕಾರಿನ ಮಾಲೀಕರರೊಂದಿಗೆ ಚರ್ಚೆ ನಡೆಸಿದ್ದಾರೆ.

ನಂತರ ಕಾರಿನ ಹಿಂಬದಿಯ ಬಂಪರ್ ತೆಗೆದು ನೋಡಿದಾಗ ಹೆಬ್ಬಾವು ಕಾರಿನ ಒಳಗೆ ನುಸುಳುತ್ತಿತ್ತು. ತಕ್ಷಣ ಅದನ್ನು ಹಿಡಿದು ಹೊರಗೆ ತಂದಿದ್ದಾರೆ. ಹೊರಗೆ ಬಂದ ಹಾವು ಸ್ನೇಕ್ ಕಿರಣ್ ಅವರ ಮೇಲೆಯೇ ಎರಗಿದೆ. ಈ ವೇಳೆ ಸ್ನೇಕ್ ಕಿರಣ್ ತಮ್ಮ ಚಾಕಚಕ್ಯತೆಯಿಂದ ಹಾವು ಬೇರೆ ಕಡೆ ಹೋಗುವುದನ್ನು ತಡೆದು ಸುರಕ್ಷಿತವಾಗಿ ತಾವು ತಂದಿದ್ದ ಚೀಲದೊಳಗೆ ಹೆಬ್ಬಾವನ್ನು ಹಿಡಿದು ಅರಣ್ಯ ಇಲಾಖೆ ಅವರ ಸಮ್ಮುಖದಲ್ಲಿ ಕಾಡಿಗೆ ಬಿಟ್ಟು ಬಂದಿದ್ದಾರೆ.

ಈ ಹಾವು 6 ಕೆ.ಜಿ. ಭಾರ ಹೊಂದಿತ್ತು. ಹೆಬ್ಬಾವು ಹಿಡಿಯುವ ವೇಳೆ ಹೆಬ್ವಾವು ಯಾವ ಆಹಾರ ಸೇವನೆ ಮಾಡುತ್ತದೆ. ಯಾವ ರೀತಿ ಆಹಾರವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಯಾವ ವೇಳೆಯಲ್ಲಿ ಇದು ಬೇಟೆಯಾಡುತ್ತದೆ. ಇದನ್ನು ತರಬೇತಿ ಇರುವವರು ಮಾತ್ರ ಹಿಡಿಯಬೇಕು. ಹಾವು ಕಂಡ ತಕ್ಷಣ ಅದನ್ನು ಕೊಲ್ಲದೇ ಸುರಕ್ಷಿತವಾಗಿ ಹಿಡಿದು ಕಾಡಿದು ಬಿಡಬೇಕೆಂದು ಅಲ್ಲಿ ನೆರೆದಿದ್ದವರಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ಶಿವಮೊಗ್ಗ: ಮನೆಯಲ್ಲಿ ಕಡಂಬಳ ಹಾವು ಪತ್ತೆ, ನಾಗರಹಾವಿಗಿಂತಲೂ ವಿಷಕಾರಿ ಇದು!