<p>ಆತ ಬರ್ತ್ ಡೇ ಪಾರ್ಟಿ ಮುಗಿಸಿಕೊಂಡು ಮನೆಗೆ ಬರ್ತಿದ್ದ. ದಾರಿ ಮಧ್ಯೆ ಅದೇ ಗ್ರಾಮದ ಇಬ್ಬರು ಯುವಕರ ಮನೆ ಮುಂದೆ ಜೋರಾಗಿ ಕೂಗಿದ್ದ. ಇಷ್ಟಕ್ಕೇ ಆತ ಕೊಲೆಯಾಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಹೆಣ ಕೆಡವಿದ ಕಿರಾತಕರನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿಯಲು ತನಿಖೆ ನಡೆಸ್ತಿದ್ದಾರೆ.</p>
