ದಾವಣಗೆರೆ: ನಿರಂತರ ಮಳೆಯ ಜೊತೆ ಬೆಲೆ ಕುಸಿತದ ಹಿನ್ನೆಲೆಯಲ್ಲಿ ರೈತನೋರ್ವ ತನ್ನ ಜಮೀನಿನಲ್ಲಿ ಬೆಳೆದಿದ್ದ ಎಲೆಕೋಸು ಬೆಳೆಯನ್ನು ಟ್ರ್ಯಾಕ್ಟರ್ ಹರಿಸಿ ನಾಶ ಮಾಡಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದಲ್ಲಿ ನಡೆದಿದೆ.

ರೈತ ವೈ.ಮಲ್ಲೇಶ್ ಎಂಬವರು ಒಂದೂವರೆ ಎಕರೆ ಜಮೀನಿನಲ್ಲಿ ಎಲೆಕೋಸು ಬೆಳೆದಿದ್ದರು. ಇದಕ್ಕಾಗಿ ಒಂದೂವರೆ ಲಕ್ಷ ರೂ ಖರ್ಚು ಮಾಡಿದ್ದರು. ನಿರಂತರ ಮಳೆಯಿಂದಾಗಿ ಶೀತ ಹೆಚ್ಚಾಗಿ, ಜಮೀನಿನಿಂದ ಎಲೆಕೋಸು ಬೆಳೆ ಹೊರತರಲಾಗದೆ ಪರದಾಡಿದ್ದಾರೆ. ಅದರೊಂದಿಗೆ ಎಲೆಕೋಸಿನ ಬೆಲೆಯೂ ಕೂಡ ಕುಸಿದು ಭಾರೀ ನಷ್ಟ ಅನುಭವಿಸಿದ್ದಾರೆ.

ಒಂದು ತಿಂಗಳ ಹಿಂದೆ ಒಂದು ಕೆ.ಜಿ ಎಲೆಕೋಸಿಗೆ 10ರಿಂದ 13 ರೂಪಾಯಿ ಬೆಲೆ ಇತ್ತು. ಇದೀಗ ಕೆ.ಜಿಗೆ ಒಂದು ರೂಪಾಯಿಗೂ ಕೇಳೋರೇ ಇಲ್ಲದಂತಾಗಿದೆ. ಅಲ್ಲದೆ, ಮಳೆಯಿಂದ ಚುಕ್ಕಿರೋಗ ಕಾಣಿಸಿಕೊಂಡಿದ್ದು, ಸಂಪೂರ್ಣ ನಷ್ಟವಾಗಿದೆ. ಇದರಿಂದ ನೊಂದಿರುವ ರೈತ ಟ್ರ್ಯಾಕ್ಟರ್ ಹರಿಸಿ ಬೆಳೆ ನಾಶ ಮಾಡಿದ್ದಾರೆ. ಅಲ್ಲದೇ, ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಅಧಿಕ ಮಳೆಯಿಂದ ನೆಲಕಚ್ಚಿದ 300 ಎಕರೆ ಬೆಳ್ಳುಳ್ಳಿ ಬೆಳೆ; ಪರಿಹಾರಕ್ಕಾಗಿ ಸರ್ಕಾರದ ಕದ ತಟ್ಟಿದ ರೈತರು - GARLIC CROP