Surprise Me!

ಭೀಮ ಆನೆಯ ಜೊತೆ ನಾಲ್ಕು ವಷ೯ದ ಬಾಲಕನ ಆಟ: ವಿಡಿಯೋ

2025-08-23 1,281 Dailymotion

ಮೈಸೂರು: ಈ ಬಾರಿ ದಸರಾ ಗಜಪಡೆಯ ಪ್ರಮುಖ ಆಕಷ೯ಣೆ ಅತ್ಯಂತ ಚಿಕ್ಕ ವಯಸ್ಸಿನ ಆನೆ ಭೀಮ. ಈ ಆನೆ ಭೀಮನೊಂದಿಗೆ ಮಾವುತ ನಂಜುಂಡಸ್ವಾಮಿ ಅವರ ನಾಲ್ಕು ವರ್ಷದ ಮಗ ಚಾರ್ವಿಕ ಆಯ೯ನ ಆಟ ಪ್ರವಾಸಿಗರನ್ನು ಸೆಳೆಯುತ್ತಿದೆ.

ನಾಡಹಬ್ಬ ದಸರಾಗೆ ಮೊದಲ ಒಂಬತ್ತು ಆನೆಗಳ ತಂಡದಲ್ಲಿ ಆಗಮಿಸಿರುವ ಮತ್ತಿಗೂಡು ಆನೆ ಶಿಬಿರದ ಬಲಭೀಮ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾನೆ. ಇದೀಗ ಭೀಮ ಆನೆ ಶಿಬಿರದ ಕೇಂದ್ರ ಬಿಂದುವಾಗಿದೆ.

ಈ ಹಿಂದೆ ಅಜು೯ನ ಆನೆಯನ್ನು ಕಟ್ಟುತ್ತಿದ್ದ ಸ್ಥಳದಲ್ಲಿಯೇ ಭೀಮ ಆನೆಯನ್ನೂ ಕಟ್ಟಲಾಗಿದೆ. ಈ ಆನೆಗೆ ಅದರ ಮಾವುತ ನಂಜುಂಡಸ್ವಾಮಿ ಭತ್ತದ ಹುಲ್ಲಿನ ಜೊತೆ ಕಾಳು, ಬೆಲ್ಲ ಹಾಗೂ ಭತ್ತವನ್ನು ಸೇರಿಸಿ ಪೆಂಡಿ ಮಾಡಿ ತಿನಿಸುವ ಸಂದರ್ಭದಲ್ಲಿ ಮಾವುತನ ನಾಲ್ಕು ವಷ೯ದ ಮಗ ಚಾವಿ೯ಕ ಆಯ೯ನೂ ಸಹ ಜೊತೆಗಿದ್ದು, ಯಾವುದೇ ಭಯವಿಲ್ಲದೆ ಆನೆಗೆ ಮೇವು ಹಾಕುವುದು ಹಾಗೂ ಆನೆ ಜೊತೆ ಇರುವುದು ಪ್ರವಾಸಿಗರ ಗಮನ ಸೆಳೆದಿದೆ.

ಪುಟ್ಟ ಬಾಲಕ ಆನೆಯನ್ನು ಭೀಮ ಎಂದು ಕರೆದೊಡನೆ ಆತನ ಮಾತನ್ನು ಕೇಳಿಸಿಕೊಂಡು ಬರುವ ಭೀಮ ಆನೆಯ‌ ಸ್ವಭಾವ ಹಾಗೂ ಬಾಲಕನ ಧೈಯ೯ ಕುತೂಹಲ ಮೂಡಿಸಿದೆ.

ಇದನ್ನೂ ಓದಿ :  ಮೈಸೂರು ದಸರಾ: ಕ್ಯಾಪ್ಟನ್ ಅಭಿಮನ್ಯು, ಪಟ್ಟದಾನೆ ಭೀಮನಿಗೆ ತಣ್ಣೀರ ಮಜ್ಜನ- ವಿಡಿಯೋ - DASARA ELEPHANTS SHOWER

Buy Now on CodeCanyon