<p>ಅದೊಂದು ಬಡ ಕುಟುಂಬ.. ಗಂಡ ಹೆಂಡತಿ ಮತ್ತು 2 ವರ್ಷದ ಮಗು.. ಗಂಡ ದುಬೈನಲ್ಲಿ ಕೂಲಿ ಮಾಡ್ತಿದ್ರೆ ಹೆಂಡತಿ ಕೇರಳದ ಅತ್ತೆ ಮನೆಯಲ್ಲಿ ವಾಸ ಮಾಡ್ತಿದ್ದಳು.. ಮೊನ್ನೆ ಗೌರಿ ಹಬ್ಬಕ್ಕೆ ಅಂತ ಹೆಂಡತಿ ಮೈಸೂರಿನ ತವರು ಮನೆಗೆ ಬಂದಿದ್ಲು.. ಆದ್ರೆ ಬಂದ ಮರುದಿನವೇ ಅತ್ತೆಗೆ ಹುಷಾರಿಲ್ಲ ಅಂತ ಹೆಳಿಕೊಂಡು ಹೊರಟುಬಿಟ್ಟಳು.. ತವರು ಮನೆಯವರೂ ಸಹ ಆಕೆ ಕೇರಳಾಗೆ ಹೋಗಿದ್ದಾಳೆ ಅಂದುಕೊಂಡಿದ್ರು.. ಆದ್ರೆ ಸಂಜೆ ಹೊತ್ತಿಗೆ ಮನೆ ಮಗಳ ಸಾವಿನ ಸುದ್ದಿ ಕುಟುಂಬಕ್ಕೆ ಸಿಕ್ಕಿತ್ತು.. </p>