Surprise Me!

ಉಡುಪಿ: ಗಣೇಶ ಚತುರ್ಥಿಗೆ ತಣ್ಣೀರೆರಚಿದ ಮಳೆ, ಮೊದಲ ದಿನ 201 ಮೂರ್ತಿಗಳ ನಿಮಜ್ಜನ

2025-08-28 11 Dailymotion

ಉಡುಪಿ: ಉಡುಪಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಮೊದಲ ದಿನವಾದ ಬುಧವಾರ 201 ಕಡೆಗಳಲ್ಲಿ ಗಣಪತಿ ಮೂರ್ತಿಗಳನ್ನು ನಿಮಜ್ಜನ ಮಾಡಲಾಗಿದೆ.

ಬಹುತೇಕ ಕಡೆ ಮೆರವಣಿಗೆ ವೇಳೆ ಮಳೆಯಿಂದಾಗಿ ಆಡಚಣೆ ಉಂಟಾಯಿತು. ಬುಧವಾರ ಸಂಜೆಯಿಂದ ರಾತ್ರಿಯತನಕ ಸತತ ಮಳೆಯಾಗಿದ್ದು ಬಹುತೇಕ ಕಡೆಗಳಲ್ಲಿ ಜನರ ಸಂಖ್ಯೆ ವಿರಳವಾಗಿತ್ತು. ಇಂದು ಬೆಳಗ್ಗಿನಿಂದಲೇ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಜಿಲ್ಲೆಯಾದ್ಯಂತ 119 ಕಡೆಗಳಲ್ಲಿ ನಿಮಜ್ಜನಗಳು ನಡೆಯಲಿವೆ.

ಉಡುಪಿ ಜಿಲ್ಲೆಯಲ್ಲಿ 486 ಸಾರ್ವಜನಿಕ ಗಣೇಶೋತ್ಸವಗಳು ನಡೆಯಲಿವೆ. ಕಳೆದ ವರ್ಷಕ್ಕಿಂತ ಐದು ಗಣೇಶನ ಮೂರ್ತಿಗಳ ಪ್ರತಿಷ್ಠಾಪನೆ ಹೆಚ್ಚಾಗಿವೆ. ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ (ಕಡಿಯಾಳಿ) ಜಿಲ್ಲೆಯ ಅತ್ಯಂತ ಹಳೆಯ ಸಂಸ್ಥೆ. ಬ್ರಹ್ಮಾವರ ಮತ್ತು ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಗಣಪತಿಗಳನ್ನು ಪೂಜಿಸಲಾಗುತ್ತಿದೆ. ಆಗಸ್ಟ್ 27ರಿಂದ ಗಣಪತಿ ನಿಮಜ್ಜನ ಪ್ರಾರಂಭವಾಗಿ ಅಕ್ಟೋಬರ್ 2ರವರೆಗೆ ನಡೆಯಲಿದೆ. ಬ್ರಹ್ಮಾವರ ಹಾಗೂ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಅತ್ಯಧಿಕ 47 ಸಾರ್ವಜನಿಕ ಗಣಪತಿಯನ್ನು ಪೂಜಿಸಲಾಗುತ್ತಿದೆ. ಜಿಲ್ಲೆಯಲ್ಲಿ 3 ಅತಿ ಸೂಕ್ಷ್ಮ ಹಾಗೂ 77 ಸೂಕ್ಷ್ಮ ಗಣಪತಿಗಳಿದ್ದು, ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.

ಸಾರ್ವಜನಿಕ ಗಣಪತಿಗಳ ವಿಸರ್ಜನೆ ಆ.27ರಂದು ಅತ್ಯಧಿಕ (201)ವಾಗಿದ್ದು, ಆ.28ರಂದು 119, ಆ.29ರಂದು 114, ಹೀಗೆ ಸೆ.7ರ ತನಕ ನಿಮಜ್ಜನ ನಡೆದರೆ, ಅ.2ರಂದು ಕೊನೆಯದಾಗಿ ಪಡುಬಿದ್ರಿ ಸಾರ್ವಜನಿಕ ಗಣಪತಿ ನಿಮಜ್ಜನ ನಡೆದಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾಹಿತಿ ನೀಡಿ, "ಜಿಲ್ಲೆಯಲ್ಲಿ ಈ ಬಾರಿ ಅತಿ ಹೆಚ್ಚು ಗಣೇಶ ವಿಸರ್ಜನೆಗಳು ನಡೆಯಲಿವೆ. ಕೆಲವು ಕಡೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಎಂದು ಪರಿಗಣಿಸಿ ಭದ್ರತೆ ಒದಗಿಸಿದ್ದೇವೆ. ಬ್ರಹ್ಮಾವರ ಮತ್ತು ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಗಣಪತಿಗಳನ್ನು ಪೂಜಿಸಲಾಗುತ್ತಿದೆ. ಆಗಸ್ಟ್ 27ರಿಂದ ಗಣಪತಿ ವಿಸರ್ಜನೆ ಪ್ರಾರಂಭವಾಗಿ ಅಕ್ಟೋಬರ್ 2 ರವರೆಗೆ ನಡೆಯಲಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಹಣೆ ಮೇಲೆ ತಿಲಕ, ಕೊರಳಲ್ಲಿ ಕೇಸರಿ ಶಾಲು, ಕೈಯಲ್ಲಿ ಗಣಪ: ಭಾವೈಕ್ಯತೆ ಮೆರೆದ ಬೆಳಗಾವಿ ಡಿಸಿ

Buy Now on CodeCanyon