Surprise Me!

Watch: ಲಿಂಗನಮಕ್ಕಿಯಿಂದ ಮತ್ತೆ ನೀರು ಬಿಡುಗಡೆ; ಜೋಗ ಜಲಪಾತದಲ್ಲಿ ಮೈದಳೆದ ಜಲವೈಭವ

2025-08-29 28 Dailymotion

ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಜಲವೈಭವ ಮರುಕಳಿಸಿದೆ. ಮತ್ತೆ ಲಿಂಗನಮಕ್ಕಿ ಜಲಾಶಯ ತುಂಬಿದ್ದರಿಂದ 11 ಗೇಟ್​​ಗಳ ಮೂಲಕ ನದಿಗೆ 35 ಸಾವಿರ ಕ್ಯೂಸೆಕ್​ ನೀರನ್ನು ಬಿಡಲಾಗುತ್ತಿದೆ. ಇದರಿಂದ, ಜೋಗದಲ್ಲಿ ಶರಾವತಿಯ ಜಲಧಾರೆಯ ಅಬ್ಬರವು ನೋಡುಗರ ಕಣ್ಮನ ಸೆಳೆಯುತ್ತಿದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್​ನಿಂದ ಶರಾವತಿ ನದಿ ನೀರು ಹಾಲಿನ‌ ನೊರೆಯಂತೆ ಧುಮುಕುವುದನ್ನು ನೋಡುವುದು ಕಣ್ಣಿಗೆ ನಿಜಕ್ಕೂ ಹಬ್ಬ.

ಪ್ರವಾಸಿಗರ ದಂಡು: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ, ಜಲಪಾತಕ್ಕೆ ನೀರು ಹರಿದು ಬರುವಂತೆಯೇ, ಅದನ್ನು ನೋಡಲೂ ಜನಸಾಗರವೇ ಹರಿದು ಬರುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಸದ್ಯ ಜೋಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವ ಬಗ್ಗೆಯೂ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಜಲಪಾತದಲ್ಲಿನ ಜಲವೈಭವದ ಕುರಿತು ಸ್ಥಳೀಯರಾದ ನಾಗರಾಜ್​ ಅವರು ಮಾತನಾಡಿ, "ಜೋಗ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಲಿಂಗನಮಕ್ಕಿ ಜಲಾಶಯ ತುಂಬಿರುವುದರಿಂದ 11 ರೇಡಿಯಲ್ ಗೇಟ್​ಗಳ ಮೂಲಕ ನದಿಗೆ 35 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಇದರಿಂದ ಜೋಗದಲ್ಲಿ ರಾಜ, ರಾಣಿ ರೋರರ್ ಮತ್ತು ರಾಕೆಟ್​ಗಳು ಅಬ್ಬರಿಸುತ್ತಿದ್ದು, ನೋಡಲು ಅತ್ಯಂತ ಮನಮೋಹಕವಾಗಿದೆ. ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮುಂದುವರಿದ ಭಾರಿ ಮಳೆಯ ಆರ್ಭಟ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್​ ಅಲರ್ಟ್​, ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಣೆ

Buy Now on CodeCanyon