Surprise Me!

ಭಾರಿ ಮಳೆಗೆ ದೆಹಲಿ- ಜೈಪುರ ಎಕ್ಸ್‌ಪ್ರೆಸ್‌ವೇಯಲ್ಲಿ 10 ಕಿ.ಮೀ. ದೂರು ಟ್ರಾಫಿಕ್​ ಜಾಮ್​

2025-09-02 12 Dailymotion

ಗುರುಗ್ರಾಮ: ದೆಹಲಿ-ಎನ್​ಸಿಆರ್​ನಲ್ಲಿ ಸೋಮವಾರ ಬೆಳಗ್ಗೆಯಿಂದ ಆರಂಭವಾದ ಮಳೆಗೆ, ಗುರುಗ್ರಾಮ್​ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು. ನಿರಂತರ ಮಳೆಯಿಂದಾಗಿ ಮಧ್ಯಾಹ್ನದ ಹೊತ್ತಿಗೆ ಇಡೀ ನಗರವೇ ಸ್ಥಗಿತಗೊಂಡಿತ್ತು.

ಇಪ್ಕೊ ಚೌಕ್​, ದೆಹಲಿ- ಜೈಪುರ ಹೆದ್ದಾರಿ ಮತ್ತು ಇತರ ಪ್ರಮುಖ ರಸ್ತೆಗಳಲ್ಲಿ ನೂರಾರು ವಾಹನಗಳು ಗಂಟೆಗಟ್ಟಲೆ ಟ್ರಾಫಿಕ್​ನಲ್ಲಿ ಸಿಲುಕಿಕೊಂಡವು. 30 ನಿಮಿಷಗಳಲ್ಲಿ ಗಮ್ಯ ಸ್ಥಳಗಳನ್ನು ತಲುಪುವವರು ಟ್ರಾಫಿಕ್​ನಿಂದಾಗಿ ತಮ್ಮ ಸ್ಥಳಕ್ಕೆ ತಲುಪಲು 3 ರಿಂದ 4 ಗಂಟೆಗಳನ್ನು ತೆಗೆದುಕೊಂಡರು. ದೆಹಲಿ- ಜೈಪುರ ಎಕ್​ಸ್​ಪ್ರೆಸ್​ ವೇ ಮೇಲೆ ಹೆಚ್ಚು ಪರಿಣಾಮ ಬೀರಿದ್ದು, ಅಲ್ಲಿ ಸುಮಾರು 10 ಕಿ.ಮೀಗಿಂತಲೂ ಹೆಚ್ಚು ದೂರ ಟ್ರಾಫಿಕ್ ಜಾಮ್​ ಉಂಟಾಗಿತ್ತು.

ನಾಲ್ಕು ಅಡಿ ನೀರು, ರಸ್ತೆಗಳಲ್ಲಿ ನಿಂತ ವಾಹನಗಳು: ಗುರುಗ್ರಾಮದ ರಸ್ತೆಗಳಲ್ಲಿ ನೀರು ತುಂಬಿ ಹರಯುತ್ತಿದ್ದು, ಕೆಲವು ಸ್ಥಳಗಳಲ್ಲಿ 4 ಅಡಿಗಳಷ್ಟು ನೀರು ನಿಂತಿತ್ತು. ಟ್ರಾಫಿಕ್​ ಜಾಮ್​ನಿಂದಾಗಿ ವಾಹನಗಳ ರಸ್ತೆ ಉದ್ದಕ್ಕೂ ನಿಂತಿದ್ದು, ತುಂಬಾ ನಿಧಾನಕ್ಕೆ ಮುಂದಕ್ಕೆ ಹೋಗುತ್ತಿದ್ದವು. ಇಪ್ಕೊ ಚೌಕ್‌ನಲ್ಲಿನ ಸ್ಥಿತಿ ತುಂಬಾ ಹದಗೆಟ್ಟಿದ್ದರಿಂದ ದೆಹಲಿ-ಜೈಪುರ ಹೆದ್ದಾರಿ ಸ್ಥಗಿತಗೊಂಡಿತ್ತು. ಪ್ರತಿ ಸೋಮವಾರದಂತೆ ಈ ಬಾರಿಯೂ ಕಚೇರಿಗೆ ಹೋಗುವವರು ಬೇಗ ಕಚೇರಿ ತಲುಪುವ ಉದ್ದೇಶದಲ್ಲಿ ರಸ್ತೆಗಿಳಿದರೆ, ಭಾರಿ ಮಳೆಯಿಂದಾಗಿ ಅದು ಹಾಳಾಗಿತ್ತು. ಜನರು ತಮ್ಮ ಮನೆಗಳನ್ನು ತೊರೆದಾಗಿತ್ತು, ಆದರೆ ಸರಿಯಾದ ಸಮಯಕ್ಕೆ ಕಚೇರಿ ತಲುಪುವುದು ಮಾತ್ರ ಸಾಧ್ಯವಾಗಲಿಲ್ಲ.

ಪರಿಸ್ಥಿತಿಯನ್ನು ಗಮನಿಸಿದ ಜಿಲ್ಲಾಧಿಕಾರಿ ಅಜಯ್​ ಕುಮಾರ್​ ತಕ್ಷಣವೇ ಶಾಲೆಗಳು ಹಾಗೂ ಕಂಪನಿಗಳಿಗೆ ಆನ್​ಲೈನ್ ಮೋಡ್​ ಅಳವಡಿಸಿಕೊಳ್ಳಿ, ಹೊರಗೆ ಹೋಗುವುದು ಅಪಾಯಕಾರಿ ಎಂದು ಸಲಹೆ ನೀಡಿದರು. ಹವಾಮಾನ ಇಲಾಖೆಯ ಪ್ರಕಾರ ಸೋಮವಾರ ಮಧ್ಯಾಹ್ನ 3 ರಿಂದ ಸಂಜೆ 7ರವರೆಗೆ 100 ಮಿ.ಮೀಗಿಂತ ಹೆಚ್ಚು ಮಳೆ ದಾಖಲಾಗಿದೆ. ಇಂದು ಆರೆಂಜ್​ ಅಲರ್ಟ್​ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ನೋಡಿ: ಭಾರಿ ಮಳೆಯಿಂದ ಹಿಮಾಚಲ ಪ್ರದೇಶದಲ್ಲಿ 16 ಭಕ್ತರು ಸಾವು: ಸಾವಿರಾರು ಜನರ ರಕ್ಷಣೆ

Buy Now on CodeCanyon