ಚಾಮರಾಜನಗರ: ಆನೆಗೆ ಆಹಾರ- ವಾಹನ ಸವಾರರಿಗೆ ಢವಢವ ಎಂಬಂತೆ ಕಬ್ಬಿಗಾಗಿ ಕಾದು ಲಾರಿ ಬಂದ ತಕ್ಷಣ ಅಡ್ಡ ಹಾಕಿ ಗಜರಾಜ ಕಬ್ಬು ಕಿತ್ತು ತಿಂದ ಘಟನೆ ಚಾಮರಾಜನಗರ- ತಮಿಳುನಾಡು ರಸ್ತೆ ಹಾದುಹೋಗುವ ಪುಣಜನೂರು ಬಳಿ ನಡೆದಿದೆ.

ಕಬ್ಬು ಹಾಗೂ ತರಕಾರಿ ತುಂಬಿದ ಲಾರಿಗಳಷ್ಟೇ ಕಾಡಾನೆಯ ಟಾರ್ಗೆಟ್ ಆಗಿದ್ದು, ಅದೃಷ್ಟವಶಾತ್ ವಾಹನ ಸವಾರರಿಗೆ ಈವರೆಗೂ ಕಾಡಾನೆ ಯಾವುದೇ ಹಾನಿ ಮಾಡಿಲ್ಲ. ನಿತ್ಯ ವಾಹನ ಸವಾರರಿಗೆ ಕಾಡಾನೆ ಫ್ರೀ ಶೋ ನೀಡುತ್ತಿದ್ದು ಬೈಕ್ ಹಾಗೂ ಕಾರಲ್ಲಿ ತೆರಳುವವರಿಗೆ ಜೀವ ಬಾಯಿಗೆ ಬಂದಂತಾಗುವ ಪ್ರಸಂಗ ಎದುರಾಗುತ್ತಿದೆ.

ತಮಿಳುನಾಡು ಹಾಗೂ ಕರ್ನಾಟಕ ಗಡಿಯಲ್ಲಿ ನಿರಂತರವಾಗಿ ಕಾಡಾನೆ ಓಡಾಡುತ್ತಿದ್ದು, ರಸ್ತೆ ಬದಿ ಬಂದು ನಿಂತು ಕಬ್ಬಿನ ವಸೂಲಿಗೆ ಇಳಿಯುತ್ತಿದೆ.
ಇತರ ವಾಹನಗಳಗತ್ತ ಕಣ್ಣೆತ್ತಿಯೂ ನೋಡದ ಕಾಡಾನೆ ಕಬ್ಬು ಹಾಗೂ ತರಕಾರಿ ತುಂಬಿದ ವಾಹನಗಳನ್ನು ಟಾರ್ಗೆಟ್ ಮಾಡಿ ವಸೂಲಿಗೆ ಇಳಿಯುತ್ತಿದ್ದು ಲಾರಿ ಚಾಲಕರು ಹೈರಾಣಾಗಿದ್ದಾರೆ.

ಕೆಲ ದಿನಗಳ ಹಿಂದೆ, ಕಾಡಾನೆಯೊಂದು ಲಾರಿಯೊಂದನ್ನು ತಡೆದು ಮುಂಭಾಗದ ಮೇಲೆ ಕಾಲಿಟ್ಟು ಕಬ್ಬು ಕಿತ್ತಿದೆ. ಆನೆ ಕಾಲಿಟ್ಟಿದ್ದೇ ತಡ ಲಾರಿಯ ಗಾಜು ಪುಡಿ ಪುಡಿಯಾಗಿದ್ದು, ಕೊನೆಗೂ ಒಂದು ಕಂತೆ ಕಬ್ಬನ್ನು ಎಳೆದೊಯ್ದಿತ್ತು. ಕಾಡಾನೆ ಅಡ್ಡ ಹಾಕಿದ ವೇಳೆ ಲಾರಿ ಚಾಲಕರಿಗೆ ಏನೂ ಹಾನಿಯಾಗದಿದ್ದರೂ ಲಾರಿಗಳ ಗಾಜು, ಸೈಡ್ ಮಿರರ್ ಜಖಂ ಆಗಿ ಚಾಲಕರು ಪರದಾಡುವಂತೆ ಮಾಡುತ್ತಿದೆ.

ಇದನ್ನೂ ನೋಡಿ: ಮತ್ತೆ ಫೀಲ್ಡ್ಗಿಳಿದ ಒಂಟಿ ಸಲಗ: ಊಟಿಗೆ ತೆರಳುವ ಮಾರ್ಗ ಮಧ್ಯೆ ಗಜರಾಜ ಕಿರಿಕ್