ಹಾಸನ ಗಣೇಶ ಮೆರವಣಿಗೆಯಲ್ಲಿ ಅಪಘಾತ ಸಂಭವಿಸಿ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಬಾರದಲೋಕಕ್ಕೆ ತೆರಳಿದ್ದಾರೆ. ದುರಂತದಲ್ಲಿ ಮನೆಗೆ ಶವವಾಗಿ ಬಂದ ಬಳ್ಳಾರಿಯ ಪ್ರವೀಣ್ ಕುಮಾರ್, ಚಿತ್ರದುರ್ಗದ ಮಿಥುನ್, ಚಿಕ್ಕಮಗಳೂರಿನ ಸುರೇಶ್ ಸಾವಿನಿಂದ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.