ಉತ್ತರಕನ್ನಡ: ಜಿಲ್ಲೆಯ ಕಾರವಾರ ಮತ್ತು ಶಿರಸಿ ತಾಲೂಕುಗಳಲ್ಲಿನ ಪ್ರತ್ಯೇಕ ಘಟನೆಗಳಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಳಿಂಗ ಸರ್ಪ ಹಾಗೂ ಚಿರತೆಯನ್ನು ರಕ್ಷಣೆ ಮಾಡಲಾಗಿದೆ.

ಕಾರವಾರದ ದೇವಳಮಕ್ಕಿ ನಿರ್ಮಿತಿ ಪಾರ್ಕ್ ಬಳಿಯ ಜನವಸತಿ ಪ್ರದೇಶದಲ್ಲಿ ಬೆಳಗ್ಗೆ ಬೃಹತ್ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಕಾರವಾರದ ಆರ್‌ಎಫ್‌ಒ ಕಿರಣ ಮತ್ತು ಅವರ ಸಿಬ್ಬಂದಿ ಸುಮಾರು 10 ಅಡಿ ಉದ್ದದ ಹಾಗೂ ನಾಲ್ಕು ವರ್ಷ ವಯಸ್ಸಿನ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ರಕ್ಷಿಸಿ, ಬಳಿಕ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಶಿರಸಿಯಲ್ಲಿ ಚಿರತೆ ರಕ್ಷಣೆ: ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ಸುರೇಶ್ ಹೆಗಡೆ ಎಂಬವರ ಮನೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದ ಗಂಡು ಚಿರತೆಯನ್ನು ರಕ್ಷಿಸಲಾಗಿದೆ. ಬಾವಿಯಲ್ಲಿ ಬಿದ್ದು ಹೊರಬರಲಾಗದೆ ಒದ್ದಾಡುತ್ತಿದ್ದ ಚಿರತೆಯನ್ನು ನೋಡಿದ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳು ಚಿರತೆಯನ್ನು ರಕ್ಷಿಸಿ, ಮರಳಿ ಕಾಡಿಗೆ ಬಿಟ್ಟರು.

ಎರಡೂ ಘಟನೆಗಳಲ್ಲಿ ಸಮಯಪ್ರಜ್ಞೆ ಮೆರೆದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರ ಸಹಕಾರದಿಂದ ವನ್ಯಜೀವಿಗಳ ಪ್ರಾಣ ರಕ್ಷಣೆ ಮಾಡಲಾಯಿತು.

ಇವುಗಳನ್ನೂ ಓದಿ: ಕೊಪ್ಪಳ: ಬರಿಗೈಯಲ್ಲಿ ಹೆಬ್ಬಾವು ಹಿಡಿದು ರಕ್ಷಿಸಿದ ಯುವಕ- ವಿಡಿಯೋ ವೈರಲ್

ಗಾಡಿ ಹತ್ತುವ ಮುನ್ನ ಹುಷಾರ್: ಸ್ಕೂಟಿ ಒಳಗೆ ಅಡಗಿ ಕುಳಿತಿದ್ದ ನಾಗರಹಾವು ರಕ್ಷಣೆ

ಕಾರಿನ ಬಂಪರ್ನಲ್ಲಿ ಸೇರಿಕೊಂಡಿದ್ದ 7 ಅಡಿ ಉದ್ದದ ಹೆಬ್ಬಾವು: ರಕ್ಷಕನ ಮೇಲೆಯೇ ಎರಗಿದ ಹಾವು