ಅಂಬಾಲ(ಹರಿಯಾಣ): 7 ಅಡಿ ಉದ್ದದ ಕಪ್ಪು ಬಣ್ಣದ ನಾಗರಹಾವೊಂದು ಟ್ರಕ್ನಲ್ಲಿ 300 ಕಿಲೋಮೀಟರ್ ಪ್ರಯಾಣಿಸಿರುವ ಘಟನೆ ನಡೆದಿದೆ. ಗಾಜಿಯಾಬಾದ್‌ನಿಂದ 300 ಕಿ.ಮೀ ದೂರದಲ್ಲಿರುವ ಅಂಬಾಲಕ್ಕೆ ಪ್ರಯಾಣಿಸುತ್ತಿದ್ದ ಟ್ರಕ್ ಚಾಲಕನಿಗೆ ತನ್ನ ಸೀಟಿನ ಬಳಿ ವಿಚಿತ್ರ ಶಬ್ದ ಕೇಳಿಸಿದೆ. ಇದು ಟೈರ್ನಿಂದ ಬಂದ ಶಬ್ಧವಾಗಿರಬಹುದು ಎಂದು ಬಾಲಕ ನಿರ್ಲಕ್ಷಿಸಿದ್ದಾನೆ.

ಅಂಬಾಲ ತಲುಪಿದಾಗ ಚಾಲಕ ಢಾಬಾವೊಂದರ ಬಳಿ ಟ್ರಕ್ ನಿಲ್ಲಿಸಿ ಚಹಾ ಕುಡಿದು ಬಂದು ನೋಡಿದಾಗ ತನ್ನ ಸೀಟಿನ ಬಳಿ ನಾಗರಹಾವು ಕಂಡು ಬೆಚ್ಚಿಬಿದ್ದಿದ್ದಾನೆ. ತಕ್ಷಣ ಚಾಲಕ ಫರಿದಾಬಾದ್‌ನಲ್ಲಿರುವ ತನ್ನ ಮಾಲೀಕನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ನಂತರ ಮಾಲೀಕ ವನ್ಯಜೀವಿ ವಿಭಾಗದ ತಂಡಕ್ಕೆ ವಿಷಯ ತಿಳಿಸಿದ್ದಾರೆ. ಆಗ ಭರತ್ ಕುಮಾರ್ ಮತ್ತು ವನ್ಯಜೀವಿ ವಿಭಾಗದ ತಂಡ ಅಂಬಾಲಕ್ಕೆ ಆಗಮಿಸಿತು.

ತಂಡದ ಸದಸ್ಯ ಭರತ್ ಕುಮಾರ್ ಮಾತನಾಡಿ, ಸುಮಾರು ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆಹಿಡಿಯಲಾಯಿತು ಎಂದರು.

ವೈಲ್ಡ್ಲೈಫ್ ಇನ್ಸ್ಪೆಕ್ಟರ್ ರಾಕೇಶ್ ಕುಮಾರ್ ಮಾತನಾಡಿ, ರಾತ್ರಿ 9 ಗಂಟೆಗೆ ಮಾಹಿತಿ ಬಂದ ತಕ್ಷಣ, ನಮ್ಮ ತಂಡವು ಅಂಬಾಲಕ್ಕೆ ತೆರಳಿತು. ನಾಗರಹಾವನ್ನು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ಮಳೆಯ ನಂತರ, ಆಶ್ರಯ ಪಡೆಯಲು ಹಾವು ವಾಹನ ಪ್ರವೇಶಿಸಿರಬಹುದು ಎಂದರು.

ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾದ ಟ್ರಕ್ ಚಾಲಕ ಹಾವನ್ನು ಸೆರೆಹಿಡಿದ ವನ್ಯಜೀವಿ ತಂಡಕ್ಕೆ ಧನ್ಯವಾದ ತಿಳಿಸಿದರು.

ಇದನ್ನೂ ಓದಿ: ಕೊಪ್ಪಳ: ಬರಿಗೈಯಲ್ಲಿ ಹೆಬ್ಬಾವು ಹಿಡಿದು ರಕ್ಷಿಸಿದ ಯುವಕ- ವಿಡಿಯೋ ವೈರಲ್

ಇದನ್ನೂ ಓದಿ: VIDEO: ಕಾರವಾರದಲ್ಲಿ ಕಾಳಿಂಗ ಸರ್ಪ, ಶಿರಸಿಯಲ್ಲಿ ಬಾವಿಗೆ ಬಿದ್ದ ಚಿರತೆ ರಕ್ಷಣೆ