Surprise Me!

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ: ಊರಿಗೆ ಬರುವ ಪ್ರಯಾಣಿಕರಿಗೆ ಹಬ್ಬದ ವಾತಾವರಣ

2025-09-24 4 Dailymotion

ದೇವನಹಳ್ಳಿ: ದಸರಾ ಅಂದರೆ ಮೈಸೂರು. ಮೈಸೂರು ಅಂದರೆ ದಸರಾ. ಆದರೆ ಅದರ ಸಂಭ್ರಮ ರಾಜ್ಯದೆಲ್ಲೆಡೆ ಹರಡಿದೆ. ಕೆಲಸದ ಕಾರಣಕ್ಕೆ ದೇಶ ವಿದೇಶಗಳಲ್ಲಿ ನೆಲೆಸಿರೋ ಕನ್ನಡಿಗರು ದಸರಾ ಹಬ್ಬ ಆಚರಣೆಗಾಗಿ ಊರಿಗೆ ಬರೋ ಸಂಭ್ರಮ ಬೇರೆ. ದೇಶ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ನಾಡಿನ ಕಲೆ ಸಂಸ್ಕೃತಿ, ಈ ನೆಲಜಲದ ಬಗ್ಗೆ ಅರಿವು ಮೂಡಿಸಲು ಮತ್ತು ಕನ್ನಡಿಗರಿಗೆ ಹಬ್ಬದ ಸ್ವಾಗತ ಕೋರುವ ಹಿನ್ನೆಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು ಟರ್ಮಿನಲ್ 2ರಲ್ಲಿ ದಸರಾ ಸಂಭ್ರಮಾಚರಣೆ ಮಾಡಲಾಗುತ್ತಿದೆ.

ಸೆ. 22 ರಿಂದ 29ರ ವರೆಗೆ 8 ದಿನಗಳ ದಸರಾ ಸಂಭ್ರಮಾಚರಣೆಗಾಗಿ ವಿವಿಧ ಕಲಾ ತಂಡಗಳ ಪ್ರದರ್ಶನವನ್ನು ಅಯೋಜಿಸಲಾಗಿದೆ. ಸೆ.22ರಂದು ಡೊಳ್ಳು ಕುಣಿತ, ಗಾರುಡಿ ಗೊಂಬೆ, 23ರಂದು ಬೇಡರ ನೃತ್ಯ ಮತ್ತು ತಮಟೆ ವಾದನ, 24ರಂದು ಘಟಂ ವಾದ್ಯಗೋಷ್ಠಿ, ಜಾನಪದ ಮತ್ತು ಸಾಂಸ್ಕೃತಿಕ ಕಲಾ ಪ್ರಕಾರಗಳ ಮೂಲಕ ಸಂಸ್ಕೃತಿ ವೈಭವ ಪ್ರದರ್ಶನ, 25ರಂದು ತೊಗಲು ಗೊಂಬೆಯಾಟ, 26 ರಂದು ಶಾಸ್ತ್ರೀಯ ಸಂಯೋಜನೆಯ ಮೂಲಕ ನವರಾತ್ರಿ ಕಥಾ ವೈಭವದ ಪ್ರಸ್ತುತಿ, 27ರಂದು ಸುಗಮ ಸಂಗೀತ, ಯಕ್ಷಗಾನ ಪ್ರಸಂಗ, ತೊಗಲು ಗೊಂಬೆಯಾಟ, 28ರಂದು ವಾದ್ಯಮೇಳ, ಭರತನಾಟ್ಯ ನೃತ್ಯರೂಪಕ ಮತ್ತು ಪ್ರದರ್ಶ, 29ರಂದು ನೃತ್ಯ ಮತ್ತು ಸಂಗೀತದ ಮೂಲಕ ದೈವಿಕ ಶಕ್ತಿಗೆ ವಿಶೇಷ ನಮನ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿ ಈ ಬಾರಿ ಕಮಲಾಕೃತಿಯಲ್ಲಿ ಬೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಪ್ರಮುಖವಾಗಿ ರಾಮಾಯಣ, ಕುರುಕ್ಷೇತ್ರ, ನರಸಿಂಹ ಅವತಾರಗಳನ್ನು ಸಾರುವ ಬೊಂಬೆಗಳ ಜೊತೆಯಲ್ಲಿ ಗಣಪತಿ, ಚಾಮುಂಡಿ, ಲಕ್ಷ್ಮೀ ಸೇರಿ ವಿವಿಧ ದೇವರ ಬೊಂಬೆಗಳ‌ ಪ್ರದರ್ಶನ ಮಾಡಲಾಗಿದೆ.

ಇದನ್ನೂ ನೋಡಿ: ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ದಸರಾಗೆ ವಿದ್ಯುಕ್ತ ಚಾಲನೆ : LIVE

Buy Now on CodeCanyon